ಇಂಥದ್ದೇ ಖಾತೆ ಬೇಕು ಎನ್ನುತ್ತಿದ್ದಾರೆ: ವ್ಯಾಪಾರಕ್ಕಾಗಿ ಸಚಿವ ಸ್ಥಾನ ಬೇಕಾ..? ಶಾಸಕ ಎಂಪಿ ರೇಣುಕಾಚಾರ್ಯ ಕಿಡಿ…

Promotion

ಬೆಂಗಳೂರು,ಜನವರಿ,29,2021(www.justkannada.in): ಸಚಿವ ಸಂಪುಟ ವಿಸ್ತರಣೆ , ಖಾತೆ ಬದಲಾವಣೆ ನಂತರ ಇಂತಹದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದ ಸಚಿವರಿಗೆ ಶಾಸಕ ಎಂಪಿ ರೇಣುಕಾಚಾರ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.jk

ಸರ್ಕಾರ, ನಾಯಕತ್ವದ ವಿರುದ್ಧ ನಮ್ಮ ಹೋರಾಟವಿಲ್ಲ. ಆದರೆ ಕೆಲವರು ಇಂಥದ್ದೇ ಖಾತೆ ಬೇಕು ಎಂದು ಕೇಳುತ್ತಿದ್ದಾರೆ. ವ್ಯಾಪಾರಕ್ಕಾಗಿ ಸಚಿವ ಸ್ಥಾನ ಬೇಕಾ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ. need –ministrial position-department-business-MP Renukacharya

ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಸಮಾನ ಮನಸ್ಕ ಬಹಳಷ್ಟು ಬಿಜೆಪಿ ಶಾಸಕರು ಇದ್ದೇವೆ. ಸರ್ಕಾರ ಸ್ಥಿರವಾಗಿರಬೇಕು ಎಂಬುದು ನಮ್ಮ ಅಪೇಕ್ಷೆ.  ನಮ್ಮದು ಸರ್ಕಾರ, ನಾಯಕತ್ವದ ವಿರುದ್ಧ ಹೋರಾಟವಿಲ್ಲ. ಆದರೆ ಕೆಲವರು ಇಂಥದ್ದೇ ಖಾತೆ ಬೇಕು ಎಂದು ಕೇಳುತ್ತಿದ್ದಾರೆ.  ವ್ಯಾಪಾರಕ್ಕಾಗಿ ಸಚಿವ ಸ್ಥಾನ ಬೇಕಾ..? ಇದರಿಂದ ಮುಖ್ಯಮಂತ್ರಿ ಹಾಗೂ ಸರ್ಕಾರದ ವರ್ಚಸ್ಸು ಕಡಿಮೆಯಾಗಿದೆ. ಎಲ್ಲ ಸಚಿವರು ಇಂಥದ್ದೇ ಖಾತೆ ಬೇಕು ಎಂದು ಕೇಳಿಲ್ಲ. ಕೆಲವರು ಬೇಕು ಎಂದು ಕೇಳುತ್ತಿದ್ದಾರೆ ಎಂದು ಹರಿಹಾಯ್ದರು.

Key words: need –ministrial position-department-business-MP Renukacharya