ಜೂನ್’ನಲ್ಲಿ ನಯನತಾರಾ- ವಿಜ್ಞೇಶ್ ಶಿವನ್ ಮದುವೆ

Promotion

ಬೆಂಗಳೂರು, ಮೇ 11, 2022 (www.justkannada.in): ನಟಿ ನಯನತಾರಾ ಮತ್ತು ನಿರ್ದೇಶಕ ವಿಜ್ಞೇಶ್ ಶಿವನ್‌ ಕೊನೆಗೂ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ .

ಈ ಜೋಡಿಯು ಇದೇ ಜೂನ್‌ 9ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಅತ್ಯಂತ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಜೋಡಿ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ಜೋಡಿಯು ಇತ್ತೀಚೆಗೆ ಆಂಧ್ರದ ತಿರುಪತಿ ವೆಂಕಟೇಶ್ವರನ ಆಶೀರ್ವಾದ ಪಡೆದು ಬಂದಿದ್ದರು. ಇದು ಗಾಸಿಪ್ ಗಳಿಗೆ ಒಂದಷ್ಟು ಪುಷ್ಟಿ ನೀಡಿದೆ.