NATIONAL COLLEGE BANGALORE : ಎನ್.ಎಸ್.ಎಸ್. ಚಟುವಟಿಕೆಗೆ ಡಾ. ಆಂಜನಪ್ಪ ಚಾಲನೆ.

 

ಬೆಂಗಳೂರು, ಅ23, 2022 (www.justkannada.in news): ಜಯನಗರ ನ್ಯಾಷನಲ್ ಕಾಲೇಜಿನಲ್ಲಿ 2022- 23 ನೇ ಸಾಲಿನ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (NSS) ಕಾರ್ಯ ಚಟುವಟಿಕೆಗಳಿಗೆ ಶಸ್ತ್ರಚಿಕಿತ್ಸಕ ಹಾಗೂ ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಡಾ. ಆಂಜನಪ್ಪ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, “ವಿದ್ಯಾರ್ಥಿಗಳು ಕೊಠಡಿಯೊಳಗಿನ ಕಲಿಕೆಗೆ ಮಾತ್ರ ಸೀಮಿತವಾಗದೇ, NSS ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಪ್ರಕೃತಿಗೆ ಹತ್ತಿರವಾಗಿ, ಅದರ ಜೊತೆಗೆ ಬೆಳೆಯಬೇಕು. ಆಗಲೇ ಸಧೃಡ ಆರೋಗ್ಯ ಹೊಂದಲು ಸಾಧ್ಯ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಜನಪದ ಹಾಗೂ ಹಿನ್ನೆಲೆ ಗಾಯಕ ಕಡಬಗೆರೆ ಮುನಿರಾಜು, ಮಾತು ಮತ್ತು ತಮ್ಮ ಸುಮಧುರ ಹಾಡಿನ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಇದೇ ವೇಳೆ, ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಬೀದಿ ನಾಟಕಗಳ ಪ್ರದರ್ಶನವೂ ನಡೆಯಿತು.
ಕಾರ್ಯಕ್ರಮದಲ್ಲಿ ನ್ಯಾಷನಲ್ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಪ್ರೊ. ಎಸ್.ಎನ್. ನಾಗರಾಜ ರೆಡ್ಡಿ, ಸಂಚಾಲಕ ಡಾ.ರಾಜಣ್ಣ, ಉಪ ಪ್ರಾಂಶುಪಾಲ ಪ್ರೊ. ಎಚ್.ಸಿ. ಬೆಲ್ಲದ್, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

key words : NATIONAL COLLEGE BANGALORE-NSS