ಗಾಯಕಿ ಎಂ.ಡಿ.ಪಲ್ಲವಿಗೆ ರಾಷ್ಟ್ರ ಪ್ರಶಸ್ತಿ

Promotion

ಬೆಂಗಳೂರು, ಜುಲೈ 23, 2019 (www.justkannada.in): ಗಾಯಕಿ ಎಂಡಿ ಪಲ್ಲವಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಉಸ್ತದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ 2018 ಪ್ರಶಸ್ತಿ ಘೋಷಣೆಯಾಗಿದ್ದು 32 ಪ್ರತಿಭೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪಟ್ಟಿಗೆ ಎಂ ಡಿ ಪಲ್ಲವಿ ಕೂಡಾ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯನ್ನು ಸಂಗೀತ ನಾಟಕ ಅಕಾಡೆಮಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಜೂ. 26ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆದಿದ್ದ ಅಕಾಡೆಮಿಯ ಆಯ್ಕೆ ಮಂಡಳಿಯ ಸಭೆಯಲ್ಲಿ ಹೆಸರುಗಳನ್ನು ಸೂಚಿಸಲಾಗಿದೆ. ಅಕಾಡೆಮಿಯ ರತ್ನ ಪ್ರಶಸ್ತಿಯು ಅತ್ಯಂತ ಪ್ರತಿಷ್ಟಿತ ಮತ್ತು ಅಪರೂಪದ ಗೌರವವಾಗಿದೆ.