ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ದೇಶದ ದನದ ಮಾಂಸದ ರಫ್ತು ಶೇ.25ರಷ್ಟು ಹೆಚ್ಚಾಗಿದೆ : ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್

Promotion

ಮೈಸೂರು,ಡಿಸೆಂಬರ್,17,2020(www.justkannada.in) : ಗೋಹತ್ಯೆ ನಿಷೇಧದ ಕಾಯ್ದೆ ಹಿಂದೆ ರಾಜಕೀಯ ಉದ್ದೇಶವಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ನಮ್ಮ ದೇಶದ ದನದ ಮಾಂಸದ ರಫ್ತು ಸುಮಾರು ಶೇ.25 ರಷ್ಟು ಹೆಚ್ಚಾಗಿದೆ. ಇಡೀ ಪ್ರಪಂಚದಲ್ಲೇ ಬೀಫ್ ರಫ್ತಿನಲ್ಲಿ ಭಾರತ ದೇಶ ಎರಡನೇ ಸ್ಥಾನದಲ್ಲಿದೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

Teachers,solve,problems,Government,bound,Minister,R.Ashok

ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಿಂದ ನಿತ್ಯ ಸುಮಾರು 20 ಲಕ್ಷ ಟನ್ ನಷ್ಟು ದನದ ಮಾಂಸ ರಫ್ತಾಗುತ್ತಿದೆ.

Narendra Modi-becomes-Prime Minister-export-country-beef25 percent-increase-Congress-spokesman-M.Laxman

ದೇಶದ ಪ್ರಮುಖ ದನದ ಮಾಂಸದ ರಫ್ತು ಕಂಪನಿಗಳ ಮಾಲೀಕರು ಬಿಜೆಪಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿಯವರಿಗೆ ಗಾಂಧಿ ತತ್ವದಲ್ಲಿ ನಂಬಿಕೆ ಇದ್ದರೆ ಕೂಡಲೇ ಎಲ್ಲಾ ಎಕ್ಸಪೋರ್ಟ್ ಕಂಪನಿಗಳನ್ನು ಮುಚ್ಚಿಸಲಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು.

ಮೈಸೂರಿನ ಪಿಂಜರಪೋಲಿನ ವ್ಯವಹಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ  ಎಂ.ಲಕ್ಷ್ಮಣ್

ಮೈಸೂರಿನ ಪಿಂಜರಪೋಲಿನ ಬಗ್ಗೆ ನಾವು ಮಾತನಾಡಬೇಕಿದೆ. ಅಲ್ಲಿ ಇರುವ ವ್ಯಕ್ತಿ ನಮ್ಮ ರಾಜ್ಯದವನೇ ಅಲ್ಲ. ಅವನು ಗುಜರಾತಿನ ಮಿಥಲ್ ಎಂಬ ವ್ಯಕ್ತಿ. ಅವನು ಬಿಜೆಪಿಯವನು. ಅವನನ್ನೆ ಯಾಕೆ 25 ವರ್ಷಗಳಿಂದ ಅಲ್ಲಿಯೇ ನೇಮಿಸಿದ್ದೀರಿ? ಅಲ್ಲಿ ಇರುವ ದನಗಳ ಬಗ್ಗೆ ಮಾಹಿತಿ ನೀಡಿ. ಅಲ್ಲಿಗೆ ಬರುವ ದನಗಳನ್ನ ಎನ್ ಮಾಡುತ್ತಿದ್ದೀರಿ? ಸುಮಾರು 25 ಸಾವಿರ ದನಗಳು ಇರುವ ಮಾಹಿತಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಇದರ ಬಗ್ಗೆ ತನಿಖೆ ಮಾಡಿಸಿ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡಿ. ನಾವು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಸಂಪೂರ್ಣವಾಹಿ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಮೈಸೂರಿನ ಪಿಂಜರಪೋಲಿನ ವ್ಯವಹಾರದ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅನುಮಾನ ವ್ಯಕ್ತಪಡಿಸಿದರು.

English summary…

Beef export has increased by 25% after Narendra Modi became PM: Cong. spokesperson M. Lakshmana

Mysuru, Dec. 17, 2020 (www.justkannada.in): “Introduction of anti-cow slaughter bill is politically motivated. Beef export in the country has increased by 25% after Narendra Modi became the Prime Minister. India is now the second-largest beef exporter in the world today,” said M. Lakshmana, Congress Spokesperson.Narendra Modi-becomes-Prime Minister-export-country-beef25 percent-increase-Congress-spokesman-M.Laxman

Addressing a press meet held at the Congress Bhavana in Mysuru today, he said that about 20 lakh tonnes of beef are exported from India every day. BJP leaders have identified themselves with major beef exporting companies in the country. If BJP leaders believe in principles of Mahatma Gandhi, let them shut companies that export beef,” he challenged.

Keywords: Beef export/ M. Lakshmana/ 20 lakh tonnes

key words : Narendra Modi-becomes-Prime Minister-export-country-beef
25 percent-increase-Congress-spokesman-M.Laxman