ಲಾಕ್ ಡೌನ್ ಎಫೆಕ್ಟ್: ನಂಜನಗೂಡು ದೇವಾಲಯದ ಆದಾಯ ಕಡಿಮೆ…

ಮೈಸೂರು,ಆಗಸ್ಟ್,31,2020(www.justkannadain):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ಹರಡದಂತೆ ತಡೆಯಲು ಸರ್ಕಾರ ಲಾಕ್ ಡೌನ್ ವಿಧಿಸಿದ್ದ ಹಿನ್ನೆಲೆ ಆರ್ಥಿಕತೆಗೆ ಸಾಕಷ್ಟು ಹೊಡೆತ ಬಿದ್ದಿದೆ. ಆಟೋಚಾಲಕರು, ಬೀದಿಬದಿ ವ್ಯಾಪಾರಿಗಳು  ಸೇರಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ.nanjanagudu-nanjundeshwara-temple-income-collection-down

ಈ ನಡುವೆ ಲಾಕ್ ಡೌನ್  ಪರಿಣಾಮ ದೇವಾಲಯಗಳ ಮೇಲೂ ಪ್ರಭಾವ ಬೀರಿದೆ. ಹೌದು, ಲಾಕ್ ಡೌನ್ ನಿಂದಾಗಿ ನಂಜನಗೂಡು ದೇವಾಲಯದ ಆದಾಯ ಸಂಗ್ರಹ ಕಡಿಮೆಯಾಗಿದೆ.  ಮಹಾಮಾರಿ ಕೊರೊನಾ ಪ್ರಾರಂಭವಾದ ದಿನಗಳಿಂದ ಈವರೆಗೂ ಅಂದಾಜು 5 ಕೋಟಿ ಹಣ ದೇವಾಲಯದ ಆದಾಯ ಕಡಿಮೆಯಾಗಿದೆ

ಕಳೆದ ಬಾರಿ ಸಂಗ್ರಹಕ್ಕೆ ಹೋಲಿಸಿದ್ರೆ ಈ ಬಾರಿ 41,57,204 ರೂ ಕಡಿಮೆ ಸಂಗ್ರಹವಾಗಿದೆ. ಆಗಸ್ಟ್ 11 ರ  ಗೋಲಕ ಪರ್ಕಾವಣೆಯಲ್ಲಿ ಸಂಗ್ರಹವಾದ ಕಾಣಿಕೆ 69,249,00 ರೂ ಆಗಿದೆ. ಜನವರಿ 2020 ರಲ್ಲಿ 1,10,82,900 ರೂ. ಹಣ ಸಂಗ್ರಹವಾಗಿತ್ತು.

ಕೊರೊನಾ ಹಿನ್ನಲೆ ನಂಜನಗೂಡು ದೇವಾಲಯಕ್ಕೆ ಭಕ್ತರಿಗೆ ಪ್ರವೇಶಕ್ಕೆ ನಿಷೇಧ ವಿಧಿಸಲಾಗಿತ್ತು. ಈ ಹಿನ್ನೆಲೆ ದೇವಾಲಯದ ಆದಾಯ ಸಂಗ್ರಹ ಕಡಿಮೆಯಾಗಿದೆ. ಇನ್ನು ದೇವಾಲಯದ ಹುಂಡಿಗೆ ನಿಷೇಧಿತ ನೋಟುಗಳು ಕಾಣಿಕೆಯಾಗಿ ಬಂದಿವೆ. ನಂಜುಂಡೇಶ್ವರ ದೇವಾಲಯದ ಹುಂಡಿಗೆ ನಿಷೇಧಿತ ನೋಟುಗಳು ಬಂದು ಬೀಳುತ್ತಿದ್ದು. ಈ ಬಾರಿ ಎಣಿಕೆಯಲ್ಲಿ 11,500 ರೂ ನಿಷೇಧಿತ ನೋಟುಗಳು ಪತ್ತೆಯಾಗಿವೆ.nanjanagudu-nanjundeshwara-temple-income-collection-down

ಕಳೆದ ಬಾರಿಯ ಎಣಿಕೆಯಲ್ಲಿ  80,500ರೂ. ಮೌಲ್ಯದ ನಿಷೇಧಿತ ನೋಟುಗಳು ಪತ್ತೆಯಾಗಿತ್ತು. ಲಾಕ್ ಡೌನ್ ನಲ್ಲೂ ನಂಜುಂಡೇಶ್ವರ ದೇವಾಲಯದಲ್ಲಿ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ಒಟ್ಟು 7 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಪತ್ತೆಯಾಗಿದೆ.

Key words: Nanjanagudu- nanjundeshwara- temple- Income- collection-down