ದಲಿತ ಹೋರಾಟಗಾರರ ಹೆಸರಿನಲ್ಲಿ ಅನ್ಯ ವರ್ಗದ ಅಧಿಕಾರಿಗಳ ಮೇಲೆ ದೌರ್ಜನ್ಯ ಖಂಡನೀಯ

ಮೈಸೂರು,ಅಕ್ಟೋಬರ್,23,2020(www.justkannada.in)  : ದಲಿತ ಹೋರಾಟಗಾರರ ಹೆಸರಿನಲ್ಲಿ ಸಮಾಜದ ಅನ್ಯ ವರ್ಗದ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಾಣಬರುತ್ತಿರುವುದು ಡಾ.ಬಾಬಾ ಸಾಹೇಬಾ ಅಂಬೇಡ್ಕರ್ ಅವರ ಹೆಸರಿಗೆ ಮಾಡುತ್ತಿರುವ ಅಗೌರವ ಎಂದು  ಡಾ.ಬಿ.ಆರ್.ಅಂಬೇಡ್ಕರ್ ದಲಿತ ಮಹಾಸಭಾ ಅಧ್ಯಕ್ಷ ಪುಟ್ಟರಂಗಸ್ವಾಮಿ ಬೇಸರವ್ಯಕ್ತಪಡಿಸಿದರು.jk-logo-justkannada-logoಶುಕ್ರವಾರ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಲಿತರಿಗೆ ಸಾಮಾಜಿಕ ನ್ಯಾಯ ಹಾಗೂ ದಲಿತರ ಮೇಲೆ ನಡೆಯುವಂತಹ ದೌರ್ಜನ್ಯ ಮತ್ತು ಅನ್ಯಾಯಗಳ ವಿರುದ್ಧ ಹೋರಾಟ ಮಾಡಲು ಡಾ.ಬಾಬಾ ಸಾಹೇಬಾ ಅಂಬೇಡ್ಕರ್ ಅವರ ಆಶಯದಂತೆ ಸಂಘಟನೆ ಮಾಡಿಕೊಳ್ಳಲಾಗುತ್ತಿದೆ. ಆದರೆ, ಸಂಘಟನೆಯ ಹೆಸರನ್ನು ಅನೇಕರು ಹಣದ ಆಸೆಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ದಲಿತರ ಸ್ವಾಭಿಮಾನ ಹಾಗೂ ದಲಿತರ ಮೇಲಿನ ದೌರ್ಜನ್ಯಕ್ಕೆ ಹೋರಾಟ ಮಾಡಲು ಸಂಘಟಿತ, ಸಕ್ರಿಯ ಹೋರಾಟ ಸಮಿತಿಯು ಇಂದು ದಿಕ್ಕು ತಪ್ಪಿ ದಿಕ್ಕಾಪಾಲಾಗಿ ಚಳುವಳಿಯ ಮಾರ್ಗವನ್ನೆ ಬದಲಿಸಿ ಕಂಡ ಕಂಡಲ್ಲಿ ಹಣಕ್ಕೆ ಹಾಗೂ ಸ್ವಂತಿಕೆಗೆ ಬಳಕೆಯಾಗುತ್ತಿರುವುದು ಇತ್ತೀಚೆಗೆ ಮೈಸೂರಿನಲ್ಲಿ ಕಂಡು ಬರುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.

ಚೋರನಹಳ್ಳಿ ಶಿವಣ್ಣ ಹಾಗೂ ಸಹಚರರಿಂದ ಹಣ ವಸೂಲಿ ಆರೋಪname,Dalit fighters,officers-alien,class,Abuse,above

ಇತ್ತೀಚೆಗೆ ಕೆಲ ದಲಿತ ಮುಖಂಡರು ಮೈಸೂರಿನಲ್ಲಿ ಹಲವು ಅಧಿಕಾರಿಗಳಿಂದ ಹಣ ವಸೂಲಿಗಾಗಿ  ಪ್ರತಿಭಟನೆ ನಡೆಸುತ್ತಿರುವುದು ಅತ್ಯಂತ ಕೀಳುಮಟ್ಟದ ಹೋರಾಟವಾಗಿದೆ. ಇವರು ಕೇಳಿದಷ್ಟು ಹಣ ಕೊಡದ ಅಧಿಕಾರಿಗಳ ವಿರುದ್ಧ  ಹೆದರಿಸಿ  ಸಂಘಟನೆ ಹೆಸರಿನಲ್ಲಿ  ಸಮುದಾಯವನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಕೆಲ ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವವರು ಡಿಎಸ್ ಎಸ್ ಸಂಘಟನೆಗೆ ಸೇರಿದವರಲ್ಲ. ಸ್ವಂತಕ್ಕೆ ಕಟ್ಟಿಕೊಂಡ ಸಂಘಟನೆಯಾಗಿದ್ದು, ಇನ್ನೂ ಮುಂದೆ ಎಲ್ಲಿಯೂ ಈ ರೀತಿ ಅನೈತಿಕ ಹೋರಾಟ ಹಾಗೂ ಧರಣಿಗೆ ಅವಕಾಶ ಕೊಡದಂತೆ ನಮ್ಮ ಸಮುದಾಯದ ನಾಯಕರು ಹಿರಿಯರು, ಚಿಂತಕರು ಈತನಿಗೆ ಬುದ್ಧಿವಾದ ಹೇಳಬೇಕು. ಸರಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಇವರಿಗೆ ಈ ರೀತಿಯ ಹೋರಾಟಕ್ಕೆ ಅನುಮತಿ ನೀಡಬಾರದೆಂದು ಪತ್ರಿಕಾಗೋಷ್ಠಿಯಲ್ಲಿ  ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಛಲವಾದಿ ಮಹಾಸಭಾದ ಅಧ್ಯಕ್ಷ ಎನ್.ಶಿವು, ಗಾಂಧಿನಗರ ಅಂಬೇಡ್ಕರ್ ಪುಟ್ ಬಾಲ್ ಕ್ಲಬ್ ಕಾರ್ಯದರ್ಶಿ ಕೆ.ವಿಶ್ವರಾಜ್ ಇತರರು ಇದ್ದರು.

key words : name-Dalit fighters-officers-alien-class-Abuse-above