ನಾಲ್ವಡಿ, ಸರ್ ಎಂ.ವಿ ಪ್ರತಿಮೆ ಸ್ಥಾಪನೆ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಬ್ಯಾಟಿಂಗ್

Promotion

ಮೈಸೂರು,ಸೆಪ್ಟೆಂಬರ್,15,2020(www.justkannada.in) : ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ ಸಹಯೋಗದಲ್ಲಿ  ಕೆಆರ್ ಎಸ್ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪಿಸುತ್ತಿದ್ದು, ಇದನ್ನ ಒಂದೇ ಬೃಹತ್ ಮಂಟಪದ ಆವರಣದಲ್ಲಿ ಸ್ಥಾಪಿಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

jk-logo-justkannada-logo

ಭಾರತರತ್ನ  ಸರ್ ಎಂ. ವಿಶ್ವೇಶ್ವರಯ್ಯ ಅವರ 160ನೇ ಜಯಂತಿಯ ಪ್ರಯುಕ್ತ ಮಂಗಳವಾರ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅಭಿಮಾನಿಗಳ ಬಳಗ  ವತಿಯಿಂದ ನಗರದ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಆಯೋಜಿಸಿದ್ದ ‘’ವಿಶ್ವ ಕಂಡ ವಿಶ್ವೇಶ್ವರಯ್ಯ” ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ರಾಮಾಂಜನೇಯರಂತ್ತಿದ್ದ  ನಾಲ್ವಡಿ ಮತ್ತು ಸರ್.ಎಂ.ವಿ  ಅವರ  ಒಡನಾಟದ ಕಾರಣ ರಾಜ್ಯ ಅಭಿವೃದ್ಧಿಯತ್ತ ಸಾಗಿತ್ತು. ಈ ಇಬ್ಬರ ಪ್ರತಿಮೆ ಸ್ಥಾಪನೆ ಸಂಬಂಧ ಅನ್ಯರ್ಥ ಕಲ್ಪಿಸಬಾರದು ಎಂದು ಶಾಸಕ ಜಿ.ಟಿ.ದೇವೇಗೌಡ ಮನವಿ ಮಾಡಿದರು.

Nalwadi-Sir MV-Statue-Installation-JDS MLA-G.T.Deve Gowda-batting

ಮೈಸೂರು ನಗರ ಸಾಂಸ್ಕೃತಿಕ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಇದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಕಲ್ಪನೆಗೆ ಪುಷ್ಠಿ ನೀಡಿದ ಯಂತ್ರ ‘ಋಷಿ ವಿಶ್ವೇಶ್ವರಯ್ಯ ಅವರ ಆಡಳಿತ ಸೇವೆಯು ಕಾರಣವಾಗಿದೆ. ವಿಶ್ವೇಶ್ವರಯ್ಯ ಅವರು ವಿಶ್ವದಲ್ಲೆ  ಜನಪ್ರಿಯರಾಗಿದ್ದು, ಅದಕ್ಕಾಗಿಯೇ ಮಂಡ್ಯ, ಮೈಸೂರು ಭಾಗದ ಪ್ರತಿಯೊಂದು ಮನೆಯಲ್ಲೂ ಸರ್.ಎಂ ವಿ ಭಾವಚಿತ್ರವಿಟ್ಟು ಸ್ಮರಿಸುತ್ತಾರೆ ಎಂದು ಹೇಳಿದರು.

ಪ್ರತಿಯೊಬ್ಬ ಇಂಜಿನಿಯರ್ಸ್ ವಿದ್ಯಾರ್ಥಿಗಳಿಗೆ ಮತ್ತು ಅಭಿಯಂತರರಿಗೆ ವಿಶ್ವೇಶ್ವರಯ್ಯ ಅವರ ಜೀವನ ಸಂದೇಶವೇ ಮಾದರಿಯಾಗಿದ್ದು, ಭಾರತವನ್ನು ರೈತಪ್ರಧಾನ ದೇಶವಾಗಿಸಲು ಶ್ರಮಿಸಿದವರು ಸರ್ ಎಂವಿ  ಎಂದು ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ ರಾಜೀವ್ ಮಾತನಾಡಿ, ವಿಶ್ವೇಶ್ವರಯ್ಯ ಅವರ ಕ್ರಿಯಾತ್ಮಕ ಶ್ರಮದಿಂದ ಕೆಆರ್ ಎಸ್ ಅಣೆಕಟ್ಟೆಯನ್ನು 124ಅಡಿ ನಿರ್ಮಿಸಲು ಸಹಕಾರಿಯಾಯಿತು. ಭಾರತರತ್ನ ಪಡೆದ ಪ್ರಪ್ರಥಮ ಕನ್ನಡಿಗ ವಿಶ್ವೇಶ್ವರಯ್ಯ ಆಗಿದ್ದಾರೆ. ಮನೆಮನೆಗೆ ಇಂದು ಕುಡಿಯುವ ನೀರು ಯೋಜನೆ UGD ಪರಿಕಲ್ಪನೆ, ಮೈಸೂರು ಸ್ಟೇಟ್ ಬ್ಯಾಂಕ್ , ಶಿಕ್ಷಣಕ್ಕೆ ಒತ್ತು ನೀಡುವ ಸಲುವಾಗಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ಮಾಡಿದರು. ಭಾಷೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಉಕ್ಕಿನ ಕಾರ್ಖಾನೆ ಯೋಜನೆ ಕಾರ್ಯಗತಕ್ಕೆ ಮುಂದಾಗಿದ್ದರು ಎಂದು ಸ್ಮರಿಸಿದರು.

ಈ ಸಂದರ್ಭ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಪ್ರತಿಮೆ ವಿವಾದ ಕುರಿತ  ಅಂಕಣಕಾರ ಹೊರೆಯಾಲ ದೊರೆಸ್ವಾಮಿ ಅವರು  ಬರೆದಿರುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ,  ಕೆ.ರಘುರಾಂ , ಹೊಟೆಲ್ ಮಾಲಿಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಎಂ.ಡಿ.ಪಾರ್ಥಸಾರಥಿ, ವಿಕ್ರಂ ಅಯ್ಯಂಗಾರ್ ಇತರರು ಭಾಗವಹಿಸಿದ್ದರು.

key words : Nalwadi-Sir MV-Statue-Installation-JDS MLA-G.T.Deve Gowda-batting