ನ್ಯಾ.ನಾಗಮೋಹನ್ ದಾಸ್ ವರದಿ ಯಥಾವತ್ ಜಾರಿಗೆ ಆಗ್ರಹ: ಮೈಸೂರಿನಲ್ಲಿ ಪ್ರತಿಭಟನೆ…

Promotion

ಮೈಸೂರು,ಜು,11,2020(www.justkannada.in):   ನ್ಯಾ.ನಾಗಮೋಹನ್ ದಾಸ್ ವರದಿ ಯಥಾವತ್ ಜಾರಿಗೆ ಹಾಗೂ ಮುಂಬೈನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ನಿವಾಸದ ಮೇಲಿನ ದಾಳಿಕೋರರ ವಿರುದ್ದ ಕ್ರಮಕ್ಕೆ  ಒತ್ತಾಯಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.jk-logo-justkannada-logo

ಮೈಸೂರು ಹುಣಸೂರು ಹೆದ್ದಾರಿಯ  ಬಳಿಯ  ಪೆಟ್ರೋಲ್ ಬಂಕ್ ಪಕ್ಕದ ವಾಲ್ಮೀಕಿ ರಸ್ತೆಯ ನಾಮಫಲಕದ ಬಳಿ ರಾಜಪರಿವಾರ ನಾಯಕರು ಭಿತ್ತಿಪತ್ರ ಹಿಡಿದು ಸಾಂಕೇತಿಕವಾಗಿ ಧರಣಿ ನಡೆಸಿದರು.

ಪ್ರತಿಭಟನೆ ವೇಳೆ ದಿ ಮೈಸೂರು ಕೊ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ  ಅವರು ಮಾತನಾಡಿ, ಸಂವಿಧಾನದ ಮೂಲ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಎಂಬ ಮೂಲತತ್ವದಂತೆ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನನಂದಾ ಮಹಾಸ್ವಾಮಿಗಳ ನೇತೃತ್ವದಲ್ಲಿ ST ಗೇ ಶೇ 7.5 ಮೀಸಲಾತಿಯನ್ನು ನೀಡುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ವ್ಯಾಪಿಸಿ ಬೆಂಗಳೂರು ಚಲೋ ಮಾಡಿದಾಗ ಅಂದಿನ ಸರ್ಕಾರ ನ್ಯಾ. ನಾಗಮೋಹನದಾಸ್ ನೇತೃತ್ವದಲ್ಲಿ ಆಯೋಗ ರಚಿಸಿದೆ. ಅದರಂತೆಯೇ  ಅದರಂತೆಯೇ ಆಯೋಗ ವಿಭಾಗೀಯ ಮಟ್ಟದಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ಮೀಸಲಾತಿಯ ಹೆಚ್ಚಳಕ್ಕೆ ಶಿಫಾರಸ್ಸು ಮಾಡಿದೆ ಅದರಂತೆ ಮಾನ್ಯ ಮುಖ್ಯಮಂತ್ರಿಗಳು ಯಥಾವತ್ ಜಾರಿಗೊಳಿಸಿ ಪ ಜಾತಿ ವರ್ಗಕ್ಕೆ ಸಾಮಾಜಿಕ ರಾಜಕೀಯ ಆರ್ಥಿಕ ಶೈಕ್ಷಣಿಕ ಪ್ರಗತಿ ಸಾಧಿಸಲು ಕ್ರಮವಹಿವಹಿಸಬೇಕು ಎಂದು ಆಗ್ರಹಿಸಿದರು.nagamohan-das-requires-implementation-protest-mysore

ಹಾಗೆಯೇ  ಸಮಾನತಾವಾದಿ ಸಂವಿಧಾನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮುಂಬೈನ ನಿವಾಸದ ಮೇಲಿನ ದಾಳಿಕೋರರ ವಿರುದ್ಧ ಗುಂಡಾ ಕಾಯ್ದೆ ಹಾಕಬೇಕೆಂದು ಪಡುವಾರಹಳ್ಳಿ ಎಂ ರಾಮಕೃಷ್ಣ  ಒತ್ತಾಯಿಸಿದರು

ಟೆನ್ನಿಸ್ ಗೋಪಿ, ಮಹೇಶ್, ಗೋವಿಂದರಾಜು, ಸುರೇಶ್,ಜಿತೇಂದ್ರ, ಚಿಕ್ಕಅರಸ ನಾಯಕ,ರಾಮನಾಯಕ,ರಾಮಣ್ಣ,ಸುರೇಶ ರವರಿದ್ದರು.

Key words: NAGAMOHAN DAS -REQUIRES – IMPLEMENTATION-Protest –Mysore