ಸಿದ್ದರಾಮಯ್ಯ ಸಿಎಂ ಅವಧಿಯಲ್ಲಿ ವರ್ಗಾಗೊಂಡ ಅಧಿಕಾರಿಗಳ ಮೇಲೆ ಸಚಿವ ಸಾ.ರಾ.ಮಹೇಶ್ ಕೆಂಗಣ್ಣು..

Promotion

 

ಮೈಸೂರು, ಜೂ.20, 2019 : (www.justkannada.in news) : ಐದು ವರ್ಷವಾದ್ರು ಇನ್ನು ಇಲ್ಲೇ ಇದ್ದೀರೇನ್ರಿ. ಟ್ರಾನ್ಸ್ ಫರ್ ಆಗಿಲ್ಲ್ವ. ನಾವೇ ಐದ್ ವರ್ಷ ಆದ್ಮೇಲೆ ಇರಲ್ಲ…
ಹೀಗೆ ಹೇಳಿದ್ದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್. ಸ್ಥಳ, ಮೈಸೂರಿನ ಜಿಲ್ಲಾ ಪಂಚಾಯ್ತಿ ಸಭಾಂಗಣ. ಇಬ್ಬರು ಅಧಿಕಾರಿಗಳನ್ನು ಕಂಡ ಕೂಡಲೇ ಆಶ್ಚರ್ಯ ಚಕಿತರಾದ ಸಚಿವರು ಈ ರೀತಿ ಉದ್ಘರಿಸಿದರು.

ಘಟನೆ ಹಿನ್ನೆಲೆ :
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ,ದೇವೇಗೌಡ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಗತಿ ಪರಿಶೀಲನಾ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರ.ಮಹೇಶ್ ಸಹ ಭಾಗವಹಿಸಿದ್ದರು.

ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಡಾ. ಬಸವರಾಜು (ಈ ಹಿಂದೆ ಡಿಎಚ್ಒ ಆಗಿದ್ದವರು) ಅವರನ್ನು ಕಂಡ ಕೂಡಲೇ ಸಚಿವ ಸಾ.ರ.ಮಹೇಶ್, ಏನ್ರಿ ಐದು ವರ್ಷ ಆದ್ರೂ ನೀವು ಇಲ್ಲೇ ಡಿಎಚ್ಒ ಆಗಿಯೇ ಮುಂದುವರೆದಿದ್ದೀರಾ..? ನಿಮ್ಗೆ ಟ್ರಾನ್ಸ್ ಫರ್ ಇಲ್ವ..? ಅಂದ್ರು. ಅದಕ್ಕೆ ಪ್ರತಿಯಾಗಿ ಡಾ.ಬಸವರಾಜು, ಸಾರ್ ನಾನು ಈಗ ಡಿಎಚ್ಒ ಅಲ್ಲ, ಜಿಲ್ಲಾ ಸರ್ಜನ್ ಆಗಿದ್ದೇನೆ ಎಂದು ಸಮಜಾಯಿಷಿ ನೀಡಿದರು.

ಬಳಿಕ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಬಿ. ಸೋಮಶೇಖರ್ ಅವರನ್ನು ಉದ್ದೇಶಿಸಿ, ಏನ್ರಿ ನೀವು ಬಂದು 5 ವರ್ಷ ಆಯ್ತಲ್ಲ. ಇನ್ನು ಇಲ್ಲೇ ಇದ್ದೀರಾ..? ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್, ಸರ್ ಚುನಾವಣೆ ವೇಳೆ ವರ್ಗಾವಣೆಗೆಗೊಂಡಿದ್ದೆ. ಇದೀಗ ಮತ್ತು ಮರು ವರ್ಗಾವಣೆ ಮಾಡಿದ್ದಾರೆ ಎಂದರು.
ಸಚಿವ ಸಾ.ರ.ಮಹೇಶ್ ಕೆಂಗಣ್ಣಿಗೆ ಗುರಿಯಾದ ಈ ಇಬ್ಬರು ಅಧಿಕಾರಿಗಳು ಕುರುಬ ಸಮಾಜಕ್ಕೆ ಸೇರಿದವರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮೈಸೂರು ಜಿಲ್ಲೆಗೆ ವರ್ಗವಾಗಿ ಬಂದವರು ಎಂಬುದು ವಿಶೇಷ.

key words : mysore-zp-sa.ra.mahesh-officers-transfer