ಸ್ಪರ್ಧೆಯ ಮೂರು ವಿಭಾಗಗಳಲ್ಲೂ ‘ ಪ್ರಥಮ ಸ್ಥಾನ ‘ ಪಡೆದ ಮೈಸೂರಿನ ಫೋಟೋ ಜರ್ನಲಿಸ್ಟ್ ಅನುರಾಗ್ ಬಸವರಾಜ್.

Promotion

 

ಮೈಸೂರು, ಅ.23, 2019 : ( www.justkannada.in news )’ 65 ನೇ ವನ್ಯ ಜೀವಿ ಸಪ್ತಾಹ ಪ್ರಯುಕ್ತ’ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನಡೆ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೈಸೂರಿನ ಫೋಟೋ ಜರ್ನಲಿಸ್ಟ್ ಎಂ.ಎಸ್.ಬಸವಣ್ಣ (ಅನುರಾಗ್ ಬಸವರಾಜ್ ) ಅವರಿಗೆ ಮೂರು ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ.

ಸಸ್ಯಹಾರಿ ವಿಭಾಗದಲ್ಲಿ ಆನೆ ಓಡಿ ಬರುತ್ತಿರುವ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದ್ದರೆ, ಇದೇ ವಿಭಾಗದಲ್ಲಿ ಗಜೇಂದ್ರ ಹಾಗೂ ಚೈತ್ರಾ ಅವರಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಬಹುಮಾನ ಲಭಿಸಿದೆ.

ಭಾವನಾತ್ಮಕ ಚಿತ್ರದ ಪೈಕಿ ನೀರು ಕುಡಿಯುತ್ತಿರುವ ಹುಲಿ ಪ್ರತಿಬಿಂಬ ಹೊಂದಿದ ಛಾಯಾಚಿತ್ರಕ್ಕೆ ಅನುರಾಗ್ ಬಸವರಾಜ್ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ. ಎಸ್.ಆರ್.ಮಧುಸೂಧನ್ ಅವರ ಮಲಗಿದ ಭಂಗಿಯ ಕಪ್ಪು ಚಿರತೆ ಛಾಯಾಚಿತ್ರಕ್ಕೆ ಎರಡನೇ ಬಹುಮಾನ ಹಾಗೂ ಕಾಡೆಮ್ಮೆ ಸೆರೆ ಹಿಡಿದ ಛಾಯಾ ಎಂಬುವವರಿಗೆ ಮೂರನೇ ಬಹುಮಾನ ಲಭಿಸಿದೆ.

mysore-wild-life-photography-anurag.basavaraj-bandipura
ಪಕ್ಷಿ ವಿಭಾಗದಲ್ಲಿ ಸಫೆಂಟ್ ಈಗಲ್ ಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಛಾಯಾ ಅವರ ಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.
ಮಾಂಸಹಾರಿ ವಿಭಾಗದಲ್ಲಿ ಬಾಲಮುರಳಿ ಸೆರೆ ಹಿಡಿದ ಹುಲಿ ಕುಟುಂಬದ ಚಿತ್ರಕ್ಕೆ ಪ್ರಥಮ ಬಹುಮಾನ, ರಘು ತೆಗೆದ ಹುಲಿ ಮತ್ತು ಮರಿಗಳ ಚಿತ್ರಕ್ಕೆ ದ್ವಿತೀಯ ಬಹುಮಾನ ಹಾಗೂ ಡಾ. ಅಮರ್ ಕೌಶಿಕ್ ಗೆ ತೃತೀಯ ಬಹುಮಾನ ಲಭಿಸಿದೆ.

 

key words : mysore-wild-life-photography-anurag.basavaraj-bandipura