ಕೊರೋನಾ ಪ್ರೆಂಟ್ ಲೈನ್ ವಾರಿಯರ್ಸ್‌ ಗೆ ಚಿಕಿತ್ಸೆ ನೀಡುವ ‘ವಿಕ್ರಮ್ ಜೇಷ್ಠ ಆಸ್ಪತ್ರೆ’ ಇಂದಿನಿಂದ ಕಾರ್ಯಾರಂಭ…

kannada t-shirts

ಮೈಸೂರು,ಜು,22,2020(www.justkannada.in): ಕೊರೋನಾ ಪ್ರೆಂಟ್ ಲೈನ್ ವಾರಿಯರ್ಸ್‌ ಗೆ ಚಿಕಿತ್ಸೆ ನೀಡುವ ಸಲುವಾಗಿ ಮೀಸಲಿಟ್ಟಿರುವ ‘ವಿಕ್ರಮ್ ಜೇಷ್ಠ ಆಸ್ಪತ್ರೆ’ ಇಂದಿನಿಂದ ಕಾರ್ಯಾರಂಭ ಮಾಡಿದೆ.jk-logo-justkannada-logo

ವಿಕ್ರಮ್ ಜೇಷ್ಠ ಆಸ್ಪತ್ರೆಗೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಪೂಜೆ ಮಾಡಿ ಆಸ್ಪತ್ರೆಗೆ ಅಧಿಕೃತ ಚಾಲನೆ‌ ನೀಡಿದರು. ಇಲ್ಲಿ  ಕೊರೋನಾ ಪ್ರೆಂಟ್ ಲೈನ್ ವಾರಿಯರ್ಸ್‌ ಗೆ ಚಿಕಿತ್ಸೆ ನೀಡಲಾಗುತ್ತದೆ.

ಪೌರಕರ್ಮಿಕರು, ಡಾಕ್ಟರ್ಸ್, ನರ್ಸ್, ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯಲ್ಲಿ 97 ಬೆಡ್ ವ್ಯವಸ್ಥೆ ಮಾಡಲಾಗಿದ್ದು, Mild ಮತ್ತು Moderate ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.  ಆಸ್ಪತ್ರೆಗೆ ಜಿಲ್ಲಾಡಳಿತ  ವೆಂಟಿಲೇಟಾರ್,  ಆಕ್ಸಿಜನ್, ಹಾಸಿಗೆ, ಪಿಪಿಇ ಕಿಟ್ ವ್ಯವಸ್ಥೆ ಮಾಡಿದೆ.

ಆಸ್ಪತ್ರೆಗೆ ನರ್ಸ್ ಮತ್ತು ಆಸ್ಪತ್ರೆಯ ಸಿಬ್ಬಂದಿ ವ್ಯವಸ್ಥೆಯನ್ನು ಮೈಸೂರು ಅಸ್ಸೋಸಿಯೇಶನ್ ಆಫ್ ಹಾಸ್ಪಿಟಲ್ಸ್,ನರ್ಸಿಂಗ್ ಹೋಮ್ಸ್,ಕ್ಲಿನಿಕ್ ಅಂಡ್ ಡಯಾಗ್ನಸ್ಟಿಕ್ ಸೆಂಟರ್ ಮಾಡಿದೆ.

Key words: mysore- Vikram jesta Hospital –start-Corona- worriors -treatment

website developers in mysore