ವ್ಯಾಕ್ಸಿನೇಷನ್‌ ಮತ್ತು ಟೆಸ್ಟಿಂಗ್ ಸೆಂಟರ್ ಹೆಚ್ಚಳ: ಬಟ್ಟೆ ಬ್ಯಾಗ್ ಗಳ ಬಳಕೆ ಬಗ್ಗೆ ಜಾಗೃತಿ- ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್…

kannada t-shirts

ಮೈಸೂರು,ಏಪ್ರಿಲ್,4,2021(www.justkannada.in): ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನಲೆ, ನಗರದಲ್ಲಿ ವ್ಯಾಕ್ಸಿನೇಷನ್‌ ಮತ್ತು ಟೆಸ್ಟಿಂಗ್ ಸೆಂಟರ್ ಹೆಚ್ಚಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶಿಲ್ಪಾನಾಗ್ ತಿಳಿಸಿದರು.Illegally,Sand,carrying,Truck,Seized,arrest,driver

ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಕ್ಸಿನೇಷನ್ ಚುರುಕುಗೊಂಡಿದ್ದು ಇಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅಧಿಕಾರಿಗಳೊಂದಿಗೆ ಲಸಿಕಾ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು.

mysore-Vaccination -Testing Center- Increase- Awareness -clothing bags-Mysore city corporation Commissioner -Shilpanag
ಕೃಪೆ-internet

ಬಳಿಕ ಮಾತನಾಡಿದ ಅವರು, ನಗರದಲ್ಲಿ ವ್ಯಾಕ್ಸಿನೇಷನ್‌ ಮತ್ತು ಟೆಸ್ಟಿಂಗ್ ಸೆಂಟರ್ ಹೆಚ್ಚಿಸಲಾಗಿದೆ. ಪ್ರತಿ ದಿನ ನಮ್ಮ ಟಾರ್ಗೆಟ್ ರೀಚ್ ಮಾಡುವುದರ ಜೊತೆಗೆ ಪ್ರಮಾಣ ಹೆಚ್ಚಿಸುತ್ತಿದ್ದೇವೆ. ಏಪ್ರಿಲ್ 1ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕ್ತಿದ್ದೇವೆ. 27 ಖಾಸಗಿ ಆಸ್ಪತ್ರೆಯ ಲಸಿಕಾ ಕೇಂದ್ರ ಸೇರಿ ಒಟ್ಟು 59 ಲಸಿಕಾ ಕೇಂದ್ರ ತೆರೆದಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಜನರೂ ಕೂಡಾ ಬರ್ತಿದ್ದಾರೆ ಲಸಿಕೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ಲಾಸ್ಟಿಕ್ ಬ್ಯಾಗ್ ದಾಸ್ತಾನು ಮಾಡಿದ್ರೆ ರೇಡ್ ಮಾಡಿ ದಂಡ…

ನಾಳೆಯಿಂದ ಪ್ಲಾಸ್ಟಿಕ್ ಬಳಕೆ ನಿಷೇಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಮುಂದಿನ 45 ದಿನಗಳಲ್ಲಿ ಈ ಬಗ್ಗೆ ವಿಶೇಷ ಅಭಿಯಾನ ಮಾಡಲಾಗುವುದು. ನಗರದ ಎಲ್ಲಾ ವಾರ್ಡ್ ಗಳಲ್ಲೂ ಈ ಬಗ್ಗೆ ಅರಿವು ಮೂಡಿಸಲಾಗುವುದು. ಎಲ್ಲಾ ಮಾರ್ಕೆಟ್ ಬಳಿಯೂ ಪ್ಲಾಸ್ಟಿಕ್ ಬಳಸದಂತೆ ಎಚ್ಚರ ವಹಿಸಲಾಗುವುದು. ಬಟ್ಟೆ ಬ್ಯಾಗ್ ಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದರು.

ಫ್ಲಾಸ್ಟಿಕ್ ಬ್ಯಾಗ್ ದಾಸ್ತಾನು ಮಾಡಿದ್ರೆ ರೇಡ್ ಮಾಡಿ ದಂಡ ಹಾಕುತ್ತೇವೆ. ಅಕ್ರಮ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮತ್ತು ಮಾರಾಟ ಕಂಡುಬಂದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದೇವೆ‌. ನಿನ್ನೆಯಷ್ಟೇ 450ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ಹಾಕಿದ್ದೇವೆ ಎಂದು ಪಾಲಿಕೆ ಆಯುಕ್ತೆ ಶಿಲ್ಪಾನಾಗ್  ಹೇಳಿದರು.

Key words: mysore-Vaccination -Testing Center- Increase- Awareness -clothing bags-Mysore city corporation Commissioner -Shilpanag

website developers in mysore