ಉ.ಪ್ರದೇಶದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮೈಸೂರು ಮೂಲದ ಮುಖ್ಯಪೇದೆ ಹೃದಯಾಘಾತದಿಂದ ಸಾವು…

Promotion

ಮೈಸೂರು,ಮೇ,4,2019(www.justkannada.in):  ಉತ್ತರ ಪ್ರದೇಶದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮೈಸೂರು ಮೂಲದ ಮುಖ್ಯಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಸಿ.ಐ.ಎಸ್.ಎಫ್‌ನ ಮುಖ್ಯ ಪೇದೆ ಆರ್.ಕೆ.ಪ್ರಕಾಶ್ (48)ಮೃತ ಪೇದೆ.  ಪ್ರಕಾಶ್ ಮೈಸೂರಿನ ಆರ್ ಬಿ ಐ ನಲ್ಲಿ ಸಿ ಐ ಎಸ್ ಎಫ್ ನ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರನ್ನ ಚುನಾವಣೆ ಭದ್ರತೆಗಾಗಿ ಉತ್ತರ ಪ್ರದೇಶ ರಾಜ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

ಈ ನಡುವೆ  ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದಾಗ  ಪ್ರಕಾಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೂಲತಃ ಮೈಸೂರು ಜಿಲ್ಲೆಯ ಹುಣಸೂರಿನ ವರಾದ ಪ್ರಕಾಶ್ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಇಂದು ಸಂಜೆ ಪ್ರಕಾಶ್ ಮೃತದೇಹ ಮೈಸೂರಿಗೆ ಆಗಮಿಸಲಿದ್ದು ನಾಳೆ ಅಂತ್ಯಕ್ರಿಯೆ ನೆರವೇರಲಿದೆ.

Key words: Mysore – Uttar Pradesh –police- died from – heart attack-election duty