ಪ್ರೊ.ಎಸ್.ಆರ್.ನಿರಂಜನ ಅವರಿಗೆ ಬೀಳ್ಕೊಡುಗೆ

Promotion

ಮೈಸೂರು,ಜುಲೈ,31,2021(www.justkannada.in):  ಕಲ್ಬುರ್ಗಿ ವಿವಿ ವಿಶ್ರಾಂತ ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಎಸ್.ಆರ್.ನಿರಂಜನ ಅವರು ಸೇವೆಯಿಂದ ನಿವೃತ್ತರಾದ ಕಾರಣ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾಗೂ ವಿಶ್ರಾಂತ ಕುಲಪತಿ ಎಸ್. ಎನ್.ಹೆಗ್ಡೆ ಅವರು ಪ್ರೀತಿಯಿಂದ ಸನ್ಮಾನಿಸಿ ಬೀಳ್ಕೋಟ್ಟರು.

ಇದೇ ವೇಳೆ ಪ್ರೊ.ಎಸ್.ಆರ್.ನಿರಂಜನ ಹಾಗೂ ಅವರ ಪತ್ನಿ ವಾಣಿ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕಳೆದ 25 ವರ್ಷದಿಂದ ಈ ವಿಭಾಗವನ್ನು ನೋಡಿಕೊಂಡು ಬಂದಿದ್ದೇನೆ. ಹಗಲಿರುಳು ಇಲ್ಲಿನ ಎಲ್ಲಾ ಪ್ರಾಧ್ಯಾಪಕರು, ಅಧ್ಯಾಪಕರು ದಕ್ಷತೆಯಿಂದ ಕಾರ್ಯ ‌ನಿರ್ವಹಿಸುತ್ತಿದ್ದಾರೆ. ಯುಜಿಸಿ ಅನುದಾನ ಕೊಡದಿದ್ದ ಸಂದರ್ಭದಲ್ಲೂ ಬೇರೆ ಬೇರೆ ಮೂಲಗಳಿಂದ ಅನುದಾನ ಸಂಗ್ರಹಿಸಿ ವಿಭಾಗದ ಬೆಳವಣಿಗೆ ಎಲ್ಲರೂ ದುಡಿದಿದ್ದಾರೆ. ಪ್ರೊ.ನಿರಂಜನ ಅವರು ವಿಭಾಗಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ವಿಭಾಗವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು ಎಂದು ಶ್ಲಾಘಿಸಿದರು.

ಕುಲಪತಿಯಾಗಿ, ಸಂಶೋಧಕರಾಗಿ, ಪ್ರಾಧ್ಯಾಪಕರಾಗಿ ಪ್ರೊ.ನಿರಂಜನ ಅವರ ಸೇವೆ ಮುಂದಿನ ಅಧ್ಯಾಪಕರಿಗೆ ಸ್ಫೂರ್ತಿ ತುಂಬುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಎಚ್.ಎನ್. ಅಪರ್ಣಾ, ನಿವೃತ್ತ ಪ್ರಾಧ್ಯಾಪಕಿ ಭಾರತಿ ಸಾಲೀಮಠ್ ಹಾಗೂ ಪ್ರೊ.ಉಮೇಶ್ ಇದ್ದರು.

key words: mysore university-VC-Prof. S.R. Niranjan-Prof. G. Hemant Kumar