ಮ್ಯಾರಥಾನ್‌ ಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ

ಮೈಸೂರು,ಫೆಬ್ರವರಿ,26,2022(www.justkannada.in):  ಮೈಸೂರು ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಎಂಜಿನಿಯರಿಂಗ್ ವತಿಯಿಂದ ಶನಿವಾರ ಮಾನಸ ಗಂಗೋತ್ರಿ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಮ್ಯಾರಥಾನ್ ದಿನಾಚರಣೆಯಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ರಾಷ್ಟ್ರೀಯ ಹಾಕಿಪಟು ಸೀತಮ್ಮ ಬಿ.ಕೆ. ಚಾಲನೆ ನೀಡಿದರು.

ನಂತರ ಮಾತನಾಡಿದ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ನಾನು ಪ್ರೊಫೆಸರ್ ಆಗಿದ್ದಾಗಲೇ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವ ಕನಸು ಕಂಡಿದ್ದೆ. ನಂತರ ಕುಲಪತಿ ಆಗಿ ಬಂದ ಮೇಲೆ ಅದಕ್ಕೆ ಅವಕಾಶ ದೊರಕಿತು. ಸರಕಾರದ ಅನುಮತಿ ಪಡೆದು ಈ ವರ್ಷದಿಂದ ಐದು ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನಮ್ಮ ಎಂಜಿನಿಯರಿಂಗ್ ಕಾಲೇಜು ರಾಜ್ಯದ 240 ಎಂಜಿನಿಯರಿಂಗ್ ಕಾಲೇಜಿಗಿಂತ ಭಿನ್ನವಾಗಿ ನಿಲ್ಲಬೇಕು ಎಂದರು. ಅಲ್ಲದೆ, ಪಠ್ಯೇತರ ಚಟುವಟಿಕೆ ಆಯೋಜಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿದರು.

ಮ್ಯಾರಥಾನ್‌ ನಲ್ಲಿ ಎಂಜಿನಿಯರಿಂಗ್ ಕಾಲೇಜಿನ ಒಟ್ಟು 84 ಮಕ್ಕಳು ಭಾಗವಹಿಸಿದ್ದರು. ಸುಮಾರು 4 ಕಿ.ಮೀ ಓಡಿದರು. ಎಂಜಿನಿಯರಿಂಗ್ ಕಾಲೇಜಿನಿಂದ ಶುರುವಾದ ಓಟ ಕ್ಲಾಕ್‌ ಟವರ್, ಕುವೆಂಪು ಪ್ರತಿಮೆ, ಜೇಸಿ ತಲುಪಿ ಮತ್ತೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮುಕ್ತಾಯಗೊಂಡಿತು. ಮೊದಲು ಗುರಿ ತಲುಪಿದ 10 ವಿದ್ಯಾರ್ಥಿಗಳು ಹಾಗೂ 10 ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಸ್ಕೂಲ್ ಆಫ್ ಎಂಜಿನಿಯರ್ ನಿರ್ದೇಶಕ ಪ್ರೊ.ಅನಂತಪದ್ಮನಾಭ ಟಿ., ಮೈವಿವಿ ವಿಶೇಷಾಧಿಕಾರಿ ಡಾ.ಚೇತನ್ ಎಚ್.ಕೆ. ಹಾಗೂ ಸಂಯೋಜನಾಧಿಕಾರಿ ಭರತ್ ಭಾರ್ಗವ್ ಭಾಗವಹಿಸಿದ್ದರು.

Key words: mysore university-VC-Prof.G.Hemanth kumar

ENGLISH SUMMARY…

UoM VC flags off marathon
Mysuru, February 26, 2022 (www.justkannada.in): Prof. G. Hemanth Kumar, Vice-Chancellor, University of Mysore, and National hockey player Seethamma B.K. flagged off the World Marathon held at the Manasagangotri campus, organized by the School of Engineering, University of Mysore.
In his address, Prof. G. Hemanth Kumar observed, “I was dreaming of establishing an Engineer College when I was working as a professor. However, I got an opportunity after I became the Vice-Chancellor. We have started five Engineering courses after getting approval from the Govt. of Karnataka. I request the students to utilize the opportunity. I wish our Engineering College will stand out of the 240 other engineering colleges in the state.” He also appreciated the efforts of the college in organizing extra-curricular activities.
About 84 students of the engineering college participated in the 4 km marathon. The marathon, which commenced from the Engineering College campus, passed through the clock tower, Kuvempu statue, and reached the JC College and returned to the University campus. The first 10 winners were given prizes.
Prof Ananthapadmanabha T., Director, School of Engineering, Dr. Chethan H.K., Special Officer, University of Mysore, and Bharath Bhargav, Coordinating officer, were present.
Keywords: University of Mysore/ marathon/ inauguration