ಮೈಸೂರು ವಿವಿ: ‘ಒತ್ತಡ ನಿರ್ವಹಣೆ’ ಕುರಿತು ನಾಳೆ ವಿಶೇಷ ಉಪನ್ಯಾಸ..

Promotion

ಮೈಸೂರು,ಅಕ್ಟೋಬರ್,11,2022(www.justkannada.in):  ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ‘ಒತ್ತಡ ನಿರ್ವಹಣೆ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅ.12ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಮಾನಸ ಗಂಗೋತ್ರಿ ಸಮಾಜ ಕಾರ್ಯ ಅಧ್ಯಯನ ವಿಭಾಗ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳ ಕಛೇರಿ, ಮೈಸೂರು ಇವರ ಸಹಯೋಗದೊಂದಿಗೆ  ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗ, ಪರೀಕ್ಷಾ ವಿಭಾಗ ಮತ್ತು ಹಣಕಾಸಿಗೆ ವಿಭಾಗದಲ್ಲಿ ವಿಧಗಳಲ್ಲಿ ಕಾರ್ಯವಹಿಸುತ್ತಿರುವ ಸಿಬ್ಬಂದಿಗಳಿಗೆ ಈ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾಗವಹಿಸುವ ಸಿಬ್ಬಂದಿಗಳಿಗೆ 400 ರೂ. ಗಳ ಗೌರವ ಧನ ಮತ್ತು ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

Key words: Mysore University-Special- lecture- tomorrow – stress management

ENGLISH SUMMARY…

UoM: Special lecture program tomorrow on ‘Stress Management’
Mysuru, October 11, 2022 (www.justkannada.in): A special lecture program on ‘Stress Management’ will be held at the Crawford Hall auditorium in the University of Mysore, on October 12, at 11.00 am.
The program is organized by the Social Works Research Department, Manasa Gangotri, in association with the Office of the District Mental Health Program Officer, Mysuru, as part of the World Mental Health Day.
This special lecture program will be beneficial for the staff working in various departments of the University of Mysore, including the Administrative Division, Examinations and Finance Divisions. A sum of Rs. 400 honorarium will be provided to the participants, along with food arrangements, according to a press release issued by the University of Mysore.
Keywords: University of Mysore/ Special lecture program/ Stress Management