ಮೈಸೂರು ವಿವಿ: ಸಂಸದ ಪ್ರತಾಪ ಸಿಂಹ ನೇತೃತ್ವದ ಸಭೆಯಲ್ಲಿ ಹಲವು ನಿರ್ಧಾರ.

Promotion

ಮೈಸೂರು,ಮಾರ್ಚ್,3,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯ ಕ್ರಾಫರ್ಡ್ ಭವನದಲ್ಲಿಂದು ಮೈಸೂರು-ಕೊಡಗು  ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಸ್ವಂತ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಕ್ರಿಯಾಯೋಜನೆಗೆ ಅನುಮತಿ ಪಡೆಯುವುದಕ್ಕೆ ಶೀಘ್ರದಲ್ಲೇ ಕೇಂದ್ರ ಸಚಿವರ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಮಾನಸಗಂಗೋತ್ರಿಯ ಪಿಜಿ ಹಾಸ್ಟೆಲ್ ಹಿಂಭಾಗದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ನೀಡಲಾಗಿತ್ತು. ನಂತರ, ಈ ಕಟ್ಟಡವು ಸಾಕಾಗುವುದಿಲ್ಲವೆಂದು ಹೇಳಿದ ಹಿನ್ನೆಲೆ ಎನ್.ಸಿ.ಎಚ್.ಎಸ್. ಕಟ್ಟಡದ ಮೊದಲನೇ ಮಹಡಿಯಲ್ಲಿ ಪೂರ್ಣ ಪ್ರಮಾಣದ ಕೊಠಡಿಗಳ ವ್ಯವಸ್ಥೆಯನ್ನು ಕಲ್ಪಿಸಿ ಸ್ಥಳಾಂತರಿಸಲು ಅವಕಾಶ ಮಾಡಿಕೊಡಲಾಯಿತು. ೨೦೨೦ರ ಸೆಪ್ಟಂಬರ್ ತಿಂಗಳಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಗಂಗೋತ್ರಿ ಆವರಣದ ಪಂಪ್‌ಹೌಸ್ ಎದುರಿನಲ್ಲಿ ೪.೨ ಎಕರೆ ಜಾಗವನ್ನು ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರಕ್ಕೆ ಲೀಜ್ ಆಧಾರದಲ್ಲಿ ಹಂಚಿಕೆ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.

ಈಗಾಗಲೇ ಸಿಐಐಎಲ್ ಮತ್ತು ಮೈಸೂರು ವಿವಿ ನಡುವೆ ಒಪ್ಪಂದವಾಗಿದೆ, ಕೇಂದ್ರಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ವಿವಿ ನಡುವೆ ಒಡಂಬಡಿಕೆಗಾಗಿ ಕೇಂದ್ರಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದು ಪ್ರೊ.ಜಿ. ಹೇಮಂತ್ ಕುಮಾರ್ ತಿಳಿಸಿದರು.

ಇದೇ ವೇಳೆ ಮಾತನಾಡಿದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಬಿ.ಶಿವರಾಮಶೆಟ್ಟಿ , ಡಿಪಿಆರ್ ಸಲ್ಲಿಸಿರುವ ಪ್ರತಿ ಮತ್ತು ಅದರಲ್ಲಿ ಏನೇನು ಇದೆ ಎಂಬುದು ನಮ್ಮ ಗಮನಕ್ಕೆ ಗೊತ್ತಾಗಲ್ಲ ಎಂದು ಹೇಳಿದರು.

ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಂಸದ ಪ್ರತಾಪ್‌ ಸಿಂಹ, ಸಿಐಐಎಲ್‌ನಿಂದ ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ ಮೇಲೆ ಅದನ್ನು ಫಾಲೋ ಅಪ್ ಮಾಡಬೇಕು. ಯೋಜನಾ ನಿರ್ದೇಶಕರಾದವರು ಕಚೇರಿಗೆ ಬಂದು ಹೋಗುವುದಲ್ಲ. ಈತನಕ ಏನಾಗಿದೆ ಎಂಬುದನ್ನು ನಮ್ಮ ಗಮನಕ್ಕೆ ತರಲಿಲ್ಲ. ಸಿಐಐಎಲ್‌ನಿಂದ ಡಿಪಿಆರ್ ಕಳುಹಿಸಿ ಸುಮ್ಮನೇ ಇದ್ದೀರಾ. ಎಂಎಚ್‌ಆರ್‌ಡಿಯಲ್ಲಿ ಕಡತವನ್ನು ಅಡಿಯಲ್ಲಿ ಇಟ್ಟುಕೊಂಡು ಕುಳಿತಿರುತ್ತಾರೆ ಎಂದರು.

ಭಾರತೀಯ ಭಾಷಾ ಸಂಸ್ಥಾನ ಕೇಂದ್ರದ ನಿರ್ದೇಶಕ ಶೈಲೇಂದ್ರ ಮೋಹನ್ ಮಾತನಾಡಿ, ಕೇಂದ್ರಸರ್ಕಾರಕ್ಕೆ ಡಿಪಿಆರ್ ಕಳುಹಿಸಲಾಗಿದೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾನು ಅಧಿಕಾರ ವಹಿಸಿಕೊಂಡು ಕೆಲವೇ ದಿನಗಳಾಗಿವೆ. ಯಾವ ಹಂತದಲ್ಲಿ ಇದೆ ಎಂಬುದನ್ನು ಗಮನಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು  ಎಂದು ತಿಳಿಸಿದರು.

ENGLISH SUMMARY….

UoM: Several decisions taken in the meeting held under MP Pratap Simha
Mysuru, March 3, 2022 (www.justkannada.in): The University of Mysore conducted a meeting at the Crawford Hall in Mysuru today, under the leadership of Mysuru-Kodagu MP Pratap Simha where a detailed discussion was held and several important decisions were taken.
A decision was taken to meet the officials concerned of the Govt. of India and ministers, to discuss getting approval for the proposal to construct own building for the Shaastreeya Kannada Atyunnata Kendra and providing other facilities.
Speaking on the occasion, Prof. G. Hemanth Kumar, Vice-Chancellor, University of Mysore informed that a place behind the PG Hostel in the Manasagangotri campus was given to construct the Kannada Research Centre building. “but as the officials concerned observed that the place is not sufficient a decision was taken to provide space on the first floor of the NCHS building along with full-fledged rooms and then shift the research center there. Again in the Syndicate meeting held in September 2020, it was decided to provide 4.2 acres land opposite the pumphouse in the Gangotri campus on lease basis.”
“Already an agreement has been entered between the CIIL and UoM and it has been forwarded to the Human Resources Development Ministry, Govt. of India for an MoU with the University of Mysore,” he explained.
Keywords: University of Mysore/ MP Pratap Simha/ meeting/ discussion

Key words: Mysore university-G.Hemanth kumar- MP -Pratap Sinha