ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ: ಡಾ.ಶೇಖರ್ ಸಿ. ಬಂಡೆ ಸ್ವಾಗತಾರ್ಹ.

kannada t-shirts

ಮೈಸೂರು,ಸೆಪ್ಟಂಬರ್,7,2021(www.justkannada.in):  ನಾವು ಸಾಗುತ್ತಿರುವ ಹಾದಿಯಲ್ಲಿ ತಂತ್ರಜ್ಞಾನವೇ ಪ್ರಧಾನವಾಗಿದೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ಕೊಟ್ಟಿರುವುದು ಮೆಚ್ಚತಕ್ಕ ವಿಷಯ ಎಂದು ನವದೆಹಲಿ ಸಿಎಸ್ ಐಆರ್ ಮಹಾನಿರ್ದೇಶಕ ಡಾ.ಶೇಖರ್ ಸಿ. ಮಂಡೆ ಅಭಿಪ್ರಾಯ ಪಟ್ಟರು.

ಕ್ರಾಫರ್ಡ್ ಹಾಲ್ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಭಾಷಣದಲ್ಲಿ ಅವರು ಹೇಳಿದಿಷ್ಟು…

ಜಗತ್ತಿನಾದ್ಯಂತ ವಿದ್ಯಾರ್ಥಿಗಳ ಸಮುದಾಯ ಡಿಜಿಟಲ್ ಯುಗಕ್ಕೆ ತಮ್ಮನ್ನು ತೆರೆದುಕೊಂಡಿದ್ದಾರೆ. ಆನ್ಲೈನ್ ‌ಮಾದರಿ ಪರೀಕ್ಷೆಯಲ್ಲೂ ನಾವೀಗ ಮುಂದಿದ್ದೇವೆ. ಹಾಗಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಂತ್ರಜ್ಞಾನ ಕಲಿಕೆಗೆ ಹೆಚ್ಚು ಒತ್ತು ನೀಡಿರುವುದು ಸ್ವಾಗತಾರ್ಹ ಎಂದರು.

ಇತ್ತೀಚಿನ ದಿನಗಳಲ್ಲಿ ವರ್ಚುವಲ್‌ ಮೂಡಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದರಿಂದ ಬೇರೆ ಬೇರೆ ಬಹು ಮಾಧ್ಯಮ ದೃಶ್ಯಗಳನ್ನು ನೋಡಬಹುದಾಗಿದೆ.‌ ವೈಜ್ಞಾನಿಕ ವಿಷಯಗಳನ್ನು ವಿದ್ಯಾರ್ಥಿಗಳು ಹೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಇದು ಸ್ವಾವಲಂಬನೆ ಕೌಶಲ್ಯ ಹೆಚ್ಚಿಸುತ್ತಿದೆ.‌ ತಾರ್ಕಿಕ, ತಾಂತ್ರಿಕ,ಕೌಶಲ್ಯ ಹಾಗೂ ಸೃಜನಶೀಲ ಆಧಾರಿತ ಶಿಕ್ಷಣ ಇವತ್ತಿನ ಅವಶ್ಯಕವೂ ಹೌದು ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರು ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜನತೆ ಕ್ಷೇಮ, ಅಭಿವೃದ್ಧಿ , ಕೈಗಾರಿಕೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು.

ಈ ಕಾಲದ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಬಳಸುವುದರಲ್ಲಿ ಬಹಳ‌ ನಿಷ್ಣಾತರು. ಜಗತ್ತಿನಾದ್ಯಂತ ವಿದ್ಯಾರ್ಥಿ ಸಮುದಾಯ ಡಿಜಿಟಲ್ ದೇಸಿಯರು ಅನೇಕ ಶಿಕ್ಷಕರಿಗೆ ಈ ತಂತ್ರಜ್ಞಾನ ಹೊಸದಿರಬಹುದು. ಹಾಗಾಗಿ ವಿದ್ಯಾರ್ಥಿಗಳು ತಂತ್ರಜ್ಞಾನ ಬೆಂಬಲಿತ ಕಲಿಕೆಯನ್ನು ನಿರಾಯಾಸವಾಗಿ ಸ್ವಾಗತಿಸಿ ಸ್ವೀಕರಿಸುವುದು ಆಶ್ಚರ್ಯವಲ್ಲ.

ರಾಷ್ಟ್ರೀಯ ಶಿಕ್ಷಣ ನೀತಿ – 2020 ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆಗೆ ಬಹಳ ಒತ್ತುಕೊಟ್ಟು ಹೇಳಿರುವುದು ಮೆಚ್ಚುವಂತಹದ್ದಾಗಿದೆ. ಅದರಲ್ಲೂ ವರ್ಚುವಲ್ ಪ್ರಯೋಗಶಾಲೆಗಳು, ದಿವ್ಯಾಂಗ್ ಸ್ನೇಹಿ ತಂತ್ರಾಂಶ ಹಾಗೂ ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವುದರಲ್ಲಿ ಮುನ್ನಡೆ ಸಾಧಿಸಿರುವುದು ಶ್ಲಾಘನೀಯ.

ಸಿಎಸ್‌ಐಆರ್‌ ನ ಅಧ್ಯಕ್ಷರಾಗಿರುವ ಪ್ರಧಾನಿ ನರೇಂದ್ರಮೋದಿ ಅವರ ಸಲಹೆ ಮೇರೆಗೆ ಈಚೆಗೆ ವರ್ಚುವಲ್ ಪ್ರಯೋಗ ಶಾಲೆಗಳನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಜತೆಗೆ ಪ್ರಯೋಗ ಶಾಲೆಗಳನ್ನು ಸ್ಥಾಪಿಸಲು ಮುಂದಾಗಿದ್ದೇವೆ. ಸಮಾಲೋಚನ ಆಧಾರಿತ ಪ್ರಯೋಗಗಳು, ಪರಸ್ಪರ ಕ್ರಿಯಾತ್ಮಕ ಸಾಮಗ್ರಿಗಳನ್ನು ಬಳಸಿ, ಕಾಮಿಕ್ಸ್, ಅನಿಮೇಶನ್ ಆಧಾರಿತ ಕಥೆಗಳನ್ನು ಬಿತ್ತರಿಸಲು ಪ್ರಸ್ತುತ ವೈಜ್ಞಾನಿಕ ವಿಷಯಗಳನ್ನು ಅಳವಡಿಸಿಕೊಳ್ಳಳಾಗುವುದು.

ಅಲ್ಲದೇ ಈ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸ್ವಾವಲಂಬನೆಯ ಕೌಶಲವನ್ನು ಹೆಚ್ಚಿಸಿಕೊಂಡು ತಮ್ಮ ಸೃಜನಶೀಲತೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು‌.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ‌ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಕುಲಸಚಿವ (ಪರೀಕ್ಷಾಂಗ) ಪ್ರೊಘಿ.ಎ.ಪಿ.ಜ್ಞಾನಪ್ರಕಾಶ್ ಇದ್ದರು.

ENGLISJH SUMMARY…

Dr. Shekar C. Mande welcomes usage of technology in education:
Mysuru, September 7, 2021 (www.justkannada.in): “The role of technology is vital in the way which we are moving. Therefore, more importance has been given for technology in the new National Education Policy. It is in fact a matter that has to be appreciated,” opined Dr. Shekar C. Mande, Director General, CSIR, New Delhi.
He participated in the 101st Convocation of the University of Mysore, held at the Crawford Hall in Mysuru today.
In his address he said, “the student community across the world has adopted to the digital era. We are leading in online education system also today. Hence, it is appreciable to note the fact that the new NEP has given more importance for technology based education. The demand for virtual mode of education has increased in recent days. It has enabled us to see multimedia visuals. Students are adopting scientific subjects more today. It in fact will increase the self dependence skills. Logical, technical, skill based and creative learning is also the need of the hour,” he explained.
Governor Thawar Chand Gehlot, Higher Education Minister Dr. C.N. Ashwathnarayan, Prof. G. Hemanth Kumar, Vice-Chancellor, University of Msyore. Prof. R. Shivappa, Registrar (Exams), Prof. A.P. Jnanaprakash and others were present.
Keywords: University of Mysore/ 101st Convocation/ Dr. Shekhar C. Mande/ new NEP/ technology/ appreciable

Key words: mysore –university-101st  convocation -Technology -use  -education-Dr. Shekhar c bande- welcome

website developers in mysore