ಜೋಳದ ಸೋಗು ತುಂಬಿದ ಲಾರಿಗೆ ವಿದ್ಯುತ್ ತಗುಲಿ ಮೂವರ ದುರ್ಮರಣ

Promotion

 

ಮೈಸೂರು, ಮೇ 21, 2020 : (www.justkannada.in news) ಜಿಲ್ಲೆಯ ಕೀಳನಪುರ ಗ್ರಾಮದ ಬಳಿ ಸಂಭವಿಸಿದ ದುರಂತದಲ್ಲಿ ಜೋಳದ ಸೋಗು ತುಂಬಿದ ಲಾರಿಗೆ ವಿದ್ಯುತ್ ತಗುಲಿ ಮೂವರು ಮೃತಪಟ್ಟರು.

ಜೋಳ ತುಂಬಿದ ಲಾರಿಗೆ ವಿದ್ಯುತ್ ತಗುಲಿದ ಪರಿಣಾಮ ಲಾರಿಯಲ್ಲಿದ್ದ ಕೂಲಿ ಕಾರ್ಮಿಕರರಿಬ್ಬರು ಸ್ಥಳದಲ್ಲೇ ಸಾವು. ಮತ್ತೊಬ್ಬ ಕೂಲಿ ಕಾರ್ಮಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಕೊನೆಯುಸಿರು.

mysore-three-workers-died-due-to-electricute-today

ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕಿನ ಹೊಸೂರು ಗ್ರಾಮದ ಕೂಲಿ ಕಾರ್ಮಿಕರಾದ ಮಹದೇವು, ತೇಜು ಮತ್ತು ಮಹದೇವ್ ನಾಯಕ ಸಾವಿಗೀಡಾದವರು. ಕೀಳನ ಪುರದಿಂದ ಮೈಸೂರಿನ ಪಿಂಜರಾಪೂಲಿಗೆ ಈ ಕೂಲಿ ಕಾರ್ಮಿಕರು ಮೇವು ಸಾಗಿಸುತ್ತಿದ್ದರು.

mysore-three-workers-died-due-to-electricute-today
ಸ್ಥಳಕ್ಕಾಗಮಿಸಿದ ವರುಣ ಪೊಲೀಸ್ ಠಾಣೆಯ ಸಿಬ್ಬಂದಿ. ಪ್ರಕರಣ ದಾಖಲಿಸಿಕೊಂಡು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮೈಸೂರಿನ ಜಿಲ್ಲಾಸ್ಪತ್ರೆಗೆ ರವಾನಿಸಿದರು.

key words : mysore-three-workers-died-due-to-electricute-today