ನಾಳೆ ಅಗ್ನಿಪಥ್ ವಿರೋಧಿಸಿ ಸಾಂಕೇತಿಕ ಪ್ರತಿಭಟನೆ: ಜುಲೈ 11 ರಂದು ಸಿಎಂ ಮನೆಗೆ ಮುತ್ತಿಗೆ- ಬಡಗಲಪುರ ನಾಗೇಂದ್ರ.

Promotion

ಮೈಸೂರು,ಜೂನ್,23,2022(www.justkannada.in): ನಾಳೆ ಬೆಳಿಗ್ಗೆ 11 ಗಂಟೆಗೆ ಅಗ್ನಿಪಥ್ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವಂತೆ ಜಿಲ್ಲಾ ಕೇಂದ್ರದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಜುಲೈ 11 ರಂದು ರೈತ ಸಂಘ  ಬೆಂಗಳೂರಿನಲ್ಲಿ ಮುಖ್ಯಮಂತ್ರಿರವರ ಮನೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಡಗಲಪುರ ನಾಗೇಂದ್ರ, ಕಬ್ಬು ಬೆಳೆಗೆ ಎಫ್.ಆರ್.ಪಿ ದರ ಹೆಚ್ಚಳ ಮಾಡಬೇಕು. ಕಬ್ಬು ನಿಯಂತ್ರಣ ಮಂಡಳಿ ಸಭೆ ನಡೆದಿಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ಬಾಕಿ ಹಣ ಕೊಟ್ಟಿಲ್ಲ. ಕಾರ್ಖಾನೆಗಳು ತೂಕದಲ್ಲಿ ಮೋಸ ಆಗ್ತಾ ಇದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದರು ಏನೂ ಉತ್ತರ ಇಲ್ಲ. ಸಮಗ್ರ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಇಟ್ಟುಕೊಂಡು , ನಂಜುಂಡಸ್ವಾಮಿರವರು ಇದ್ದಾಗ ಕರ ನಿರಾಕರಣೆ ಚಳುವಳಿ ನಡೆದಿತ್ತು. ಈ ಮೂಲಕ ವಿದ್ಯುತ್ ಶುಲ್ಕ ಕಟ್ಟದೆ ಚಳವಳಿ ಮಾಡಲಾಗಿತ್ತು. ಈ ಸರ್ಕಾರ ಹಳೆ ಬಾಕಿ ಪಾವತಿಸಲು ನೋಟೀಸ್ ಕೊಡ್ತಾ ಇದೆ. ಬಲವಂತವಾಗಿ ವಿದ್ಯುತ್ ಬಿಲ್ ಪಾವತಿ ಮಾಡಿಸಿಕೋಳ್ಳಲಾಗುತ್ತಿದೆ. ಬಿಲ್ ಕಟ್ಟಲಾಗದ ರೈತರ ಮನೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗ್ತಾ ಇದೆ. ಮುಖ್ಯಮಂತ್ರಿ ಅವರು ಈ ಬಗ್ಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ ಎಂದು ಬಡಗಲಾಪುರ ನಾಗೇಂದ್ರ ಕಿಡಿಕಾರಿದರು.

ನಾಳೆ  ಬೆಳಿಗ್ಗೆ 11 ಗಂಟೆಗೆ ಅಗ್ನಿಪಥ್ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವಂತೆ ಜಿಲ್ಲಾ ಕೇಂದ್ರದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತದೆ. ಜುಲೈ 11 ರಂದು ರೈತ ಸಂಘ  ಬೆಂಗಳೂರಿನಲ್ಲಿ ಮುಖ್ಯಮಂತ್ರಿ ರವರ ಮನೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ. ಈ‌ ಸಂಬಂಧಿಸಿದಂತೆ ಪೂರ್ವ ಭಾವಿ ಸಭೆಯನ್ನು ಜುಲೈ 02 ರಂದು ದಾವಣಗೆರೆ ಜಿಲ್ಲೆಯಲ್ಲಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ಜುಲೈ 01 ರಂದು ಮೈಸೂರು ನಗರದಲ್ಲಿ ದಕ್ಷಿಣ ಪದವೀಧರ ಚುನಾವಣೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುತ್ತದೆ. ಇಲ್ಲಿ ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಜುಲೈ 21 ಕ್ಕೆ ನರಗುಂದ ನವಲಗುಂದ ದಲ್ಲಿ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ನರಗುಂದದಲ್ಲಿ ಬೃಹತ್ ಸಮಾವೇಶ ರೈತ ಸಂಘ ಹಮ್ಮಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ನಕಲಿ ರಸಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ‌ ವ್ಯಾಪಕವಾಗಿದೆ. ಕೃಷಿಮಂತ್ರಿ ಪ್ರತಿನಿಧಿಸುವ ಹಾವೇರಿಯಲ್ಲಿ ಹೆಚ್ಚು ಕಂಡುಬರುತ್ತದೆ.ಈ ಸಂಬಂಧಿಸಿದಂತೆ ಇದೇ ತಿಂಗಳ 25 ರಂದು ಕೃಷಿ ಮಂತ್ರಿ ಭೇಟಿ ಮಾಡಲಿದ್ದೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.

Key words: mysore-Symbolic -protest –against-agnipath-Badagalpur Nagendra