ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಸಮರ್ಥಿಸಿಕೊಂಡ  ಸಂಸದ ಶ್ರೀನಿವಾಸ್ ಪ್ರಸಾದ್: ಪ್ರತಿಭಟನೆ ಬಗ್ಗೆ ಏನಂದ್ರು ಗೊತ್ತೆ..?

ಮೈಸೂರು,ಡಿ,20,2019(www.justkannada.in):  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.

ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಂಸದ ಶ್ರೀನಿವಾಸ್ ಪ್ರಸಾದ್, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದಿದೆ. ಯಾವುದೋ ಒಂದು ಧರ್ಮದ ವಿರುದ್ಧವಾಗಿ ತಿದ್ದುಪಡಿ ಮಾಡಿಲ್ಲ. ಮುಸ್ಲಿಂ ಸಮುದಾಯದವರು ಅತಿಹೆಚ್ಚು ಸಂಖ್ಯೆಯಲ್ಲಿ ಇರುವ ದೇಶಗಳಲ್ಲಿ ಭಾರತವು ಒಂದು. ನಮ್ಮಲ್ಲಿರುವ ಎಲ್ಲಾ ಮುಸ್ಲೀಂರು ಭಾರತೀಯರೇ ಎಂಬುದು ಸ್ಪಷ್ಟವಾಗಿದೆ‌.ಆದರೆ ಈ ಬಗ್ಗೆ ಅನಗತ್ಯವಾಗಿ ಗೊಂದಲ ಮೂಡಿಸುಲಾಗುತ್ತಿದೆ ಎಂದು ತಿಳಿಸಿದರು.

ಸಿಎಎ ವಿರೋಧ ಅಥವಾ ಪ್ರತಿಭಟನೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ…

ಕಾಂಗ್ರೆಸ್ ಸತತ ವೈಫಲ್ಯಗಳಿಂದ ಹತಾಶ ಸ್ಥಿತಿಗೆ ತಲುಪಿದೆ. ರಾಹುಲ್ ಗಾಂಧಿ ಹಾದಿಯಾಗಿ ರಾಷ್ಟಮಟ್ಟದಲ್ಲಿ ಪಕ್ಷ ಮುನ್ನಡೆಸುವ ನಾಯಕರೆ ಕಾಣಿಸುತ್ತಿಲ್ಲ. ಸಿಎಎ ವಿರೋಧ ಅಥವಾ ಪ್ರತಿಭಟನೆ ಮಾಡುವುದಕ್ಕೆ ನನ್ನ ವಿರೋಧ ವಿಲ್ಲ. ಆದರೆ ಶಾಂತಿ ಸುವ್ಯವಸ್ಥೆಯನ್ನು ಯಾರು ಹಾಳು ಮಾಡಬಾರದು ಎಂಧು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಹುಣಸೂರು ಉಪಚುನಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿ ಮಾಜಿ ಸಚಿವ ಜಿ.ಟಿ ದೇವೇಗೌಡರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಶ್ರೀನಿವಾಸ್ ಪ್ರಸಾದ್,  ಉಪಚುನಾವಣೆಯಲ್ಲಿ ಜಿಟಿಡಿ ನಿಲುವು ಸರಿಯಲ್ಲ. ಒಂದು ಪಕ್ಷದಲ್ಲಿ ಶಾಸಕಾರಾಗಿ, ಸಚಿವರಾಗಿದ್ದವ್ರು ಹೀಗೆ ಮಾಡಬಾರದಿತ್ತು‌. ಜೆಡಿಎಸ್ ಪಕ್ಷದಲ್ಲಿ ಇದ್ದುಕೊಂಡು ಜೆಡಿಎಸ್ ಅಭ್ಯರ್ಥಿ ಗೆ ಬೆಂಬಲ ನೀಡಬೇಕಿತ್ತು. ಆದರೆ ಅವರು ತೆಗೆದುಕೊಂಡ ರಾಜಕೀಯ ನಿಲುವು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪೇಜಾವರ ಶ್ರೀಗಳು ಬೇಗ ಗುಣಮುಖರಾಗಲಿ…

ಪೇಜಾವರ ಶ್ರೀಗಳು ಅನಾರೋಗ್ಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಶ್ರೀನಿವಾಸ್ ಪ್ರಸಾದ್, ಪೇಜಾವರ ಸ್ವಾಮೀಜಿಯವರು ಹಿರಿಯರು, ಧಾರ್ಮಿಕ ಮುಖಂಡರು. ಅವರಿಗೆ ವಯಸ್ಸಾಗಿದೆ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಅಂತ ಗೊತ್ತಾಗಿದೆ. ಅವರು ಬೇಗ ಗುಣಮುಖರಾಗಲೇಂದು ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

Key words: mysore-Srinivas Prasad-defended – Citizenship Amendment Act.