ಪದ್ಮಶ್ರೀ ಪುರಸ್ಕೃತ, ‘ಸುಧರ್ಮಾ ಪತ್ರಿಕೆ ‘ ಸಂಪಾದಕ ಕೆ.ವಿ. ಸಂಪತ್ ಕುಮಾರ್ ವಿಧಿವಶ.

Promotion

 

ಮೈಸೂರು, ಜೂ.30, 2021 : (www.justkannada.in news) ‘ಸುಧರ್ಮಾ ಪತ್ರಿಕೆ ‘ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಅಯ್ಯಂಗಾರ್ (64) ವಿಧಿವಶ.

2019ರ ಪದ್ಮಶ್ರೀ ಪುರಸ್ಕೃತರಾಗಿದ್ದ ಸಂಪತ್ ಕುಮಾರ್ . ಸುಧರ್ಮಾ ವಿಶ್ವದ ಏಕೈಕ ಸಂಸ್ಕೃತ ದೈನಿಕ. ಕಳೆದ ನಾಲ್ಕು ದಶಕಗಳಿಂದ ಸುಧರ್ಮಾ ಮುನ್ನಡೆಸಿದ್ದ ಸಂಪತ್ ಕುಮಾರ್. ಸಂಸ್ಕೃತ ಭಾಷೆ ಉಳಿವಿಗೆ ಶ್ರಮಿಸಿದ್ದರು ಇವರ ಸಂಸ್ಕೃತ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡಿ ಗೌರವಿಸಿತ್ತು.

jk

ಇಂದು ಮಧ್ಯಾಹ್ನ ಪತ್ರಿಕೆ ಕೆಲಸದಲ್ಲಿರುವಾಗಲೇ ವಿಧಿವಶರಾದ ಸಂಪತ್ ಕುಮಾರ್. ತೀವ್ರ ಹೃದಯಾಘಾತದಿಂದ ನಿಧನರಾದ ಸಂಪತ್ ಕುಮಾರ್.

ಜಿಲ್ಲಾ ಪತ್ರಕರ್ತರ ಸಂಘ ಸಂತಾಪ :

ಕಳೆದ 4 ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ತೊಡಗಿದ್ದ ಸಂಪತ್ ಕುಮಾರ್ ನಿಧನ ಅಘಾತ ತಂದಿದೆ. ಇಡೀ ಪತ್ರಿಕಾ ರಂಗಕ್ಕೆ ಇದು ತುಂಭಲಾರದ ನಷ್ಟವಾಗಿದೆ. ತಮ್ಮ ವೃತ್ತಿಯಲ್ಲಿ‌ ನಿರತರಾಗಿದ್ದಾಗಲೆ ಹೃದಯಾಗಾತದಿಂದ ಮೃತಪಟ್ಟಿದ್ದಾರೆ. ಇಡೀ ಜಗತ್ತಿನಲ್ಲಿ ಏಕೈಕ ಸಂಸ್ಕೃತಿ ದಿನ ನಡೆಸಿಕೊಂಡು ಬಂದಿದ್ದರು. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ. ಸಂತಾಪ ಸೂಚಿಸಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್.

key words : mysore-Sanskrit-news-paper-sudharma-padmashri-awardee