ಹಲ್ಲೆ ಮಾಡಿರುವವ ದೊಡ್ಡ ‘ ಸೆಲೆಬ್ರಿಟಿ ‘ ಎಂಬ ಕಾರಣಕ್ಕೆ ದೊಡ್ಡ ಗುರುತರ ಕೇಸೇನೂ ಆಗೋದಿಲ್ಲ. ಅಪರಾಧವೆಂದು ಹೇಳಲಾಗದ ‘ ಪುಟಗೋಸಿ’ ಪೆಟ್ಟು ಅದು .

Promotion

 

ಮೈಸೂರು, ಜು.20, 2021 : (www.justkannada.in news) ಕಳೆದ ಹತ್ತು ದಿನದಿಂದ ಸುದ್ದಿ ಮಾಧ್ಯಮಗಳಲ್ಲಿ ಅದರಲ್ಲೂ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಆಕ್ರಮಿಸಿರುವ ನಟ ದರ್ಶನ್ ಹಾಗೂ ಹಲ್ಲೆ ಪ್ರಕರಣದ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ  ಅಭಿಪ್ರಾಯ ಇಲ್ಲಿದೆ.

ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಯಾರು ದೂರನ್ನು ಕೊಡಬೇಕು. ಒಂದೂ ಹೊಡಿಸ್ಕೊಂಡೋರು ಕಂಪ್ಲೇಂಟ್ ಕೊಡ್ಬೇಕು, ಇಲ್ಲ ಹೋಟೆಲ್ ನವರು ಕಂಪ್ಲೇಟ್ ಕೊಡಬೇಕು. ಮೂರನೆಯವರು ಕಂಪ್ಲೇಟ್ ಕೊಟ್ಟರೆ ಆ ಕೇಸು ನಿಲ್ಲುತ್ತಾ ಎಂಬ ಪ್ರಶ್ನೆಗೆ ನಿವೃತ್ತ ಪೊಲೀಸ್ ಅಧಿಕಾರಿ ಜೆ.ಬಿ.ರಂಗಸ್ವಾಮಿ ಅವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದಿರುವ ಉತ್ತರ ಹೀಗಿದೆ…

ಹೊಡೆಸಿಕೊಂಡವರೇ , ಸಾವು ನೋವಿಗೆ ಈಡಾದವರೇ ದೂರು ಕೊಡಬೇಕೆಂದೇನೂ ಇಲ್ಲ. ಯಾರು ಬೇಕಾದರೂ ಕೃತ್ಯ ನಡೆದಿದೆ ಎಂದು ದೂರು ನೀಡಬಹುದು. ಆ್ಯಕ್ಸಿಡೆಂಟಾಗಿ ನರಳುತ್ತಿರುವವನೊ , ಸತ್ತವನೋ ಠಾಣೆಗೆ ಬಂದು ಬಂದು ದೂರು ನೀಡಲಾದೀತೇ ?.
ಕೃತ್ಯ ನಡೆದಿರುವುದು ಯಾವನೋ ಒಬ್ಬ ವ್ಯಕ್ತಿಯ ಮೇಲಲ್ಲ. ಅವನೇ ಬಂದು ದೂರು ಕೊಡಬೇಕು ಎಂದೇನೂ ಇಲ್ಲ. ಅದು ಸಮಾಜದ ವಿರುದ್ಧ , ಸರ್ಕಾರದ ವಿರುದ್ಧ ನಡೆದ ಅಪರಾಧ. ಕೃತ್ಯ ನಡೆದ ದೂರನ್ನು ಅಥವಾ ಮಾಹಿತಿಯನ್ನು ಯಾರು ಬೇಕಾದರೂ ಪೊಲೀಸಿಗೆ ಸಲ್ಲಿಸಬಹುದು.

jk

ಹಲ್ಲೆ ಮಾಡಿರುವವನು ದೊಡ್ಡ ಸೆಲೆಬ್ರಿಟಿ ಎಂಬ ಕಾರಣಕ್ಕೆ ದೊಡ್ಡ ಗುರುತರ ಕೇಸೇನೂ ಆಗೋದಿಲ್ಲ. ಅಪರಾಧವೆಂದು ಹೇಳಲಾಗದ ಪುಟಗೋಸಿ ಪೆಟ್ಟು ಅದು . ಕೈಯ್ಯಿಂದ ಹೊಡೆದು ನೋವುಂಟು ಮಾಡಿದ್ದಾನೆ. ಇದೇನು ಪಿತೂರಿ ಒಳಸಂಚು ಮಾಡಿ , ನಡೆಸಿದ ಘನ ಘೋರ ಕೃತ್ಯವೇ ?!.

ಗಾಯಾಳುವಿಗೆ ಏಟಾಗಿದೆ ಎಂದು ಸಿಸಿಟಿವಿ ಫುಟೇಜ್ ಇದ್ದರೆ ಸಾಲದು. ಗಾಯವಾಗಿರಬೇಕು. ಆತ ವಾರಗಟ್ಟಲೇ ಚಿಕಿತ್ಸೆ ಪಡೆದಿರಬೇಕು. ಕಷ್ಟ ನಷ್ಟಗಳಿಗೀಡಾಗಿರಬೇಕು. ಅಂತಹುದೇನೇನೂ ಆಗಿಲ್ಲ. ಯಾವನೋ ಬೋಳಬುಂಡೆ ಗುಂಡ ಗೊಣಗೊಣ ಅಂದರೆ ಕೇಸಾಗಿ ಸೆಲೆಬ್ರಿಟಿ ಜೈಲು ಸೇರುತ್ತಾನೆಯೇ ? ಹಾಗೇನೂ ಆಗೋದಿಲ್ಲ.

” ಆ ಸೆಲೆಬ್ರಿಟಿ ದುರುದ್ದೇಶಪೂರ್ವಕವಾಗಿ ಹಲ್ಲೆ ಮಾಡಿದ. ಆಗ ಪ್ರಜ್ಞಾಶೂನ್ಯನಾಗಿ ರಕ್ತಸಿಕ್ತನಾಗಿದ್ದ ಗಾಯಾಳುವನ್ನು ನಾವೇ ಆಸ್ಪತ್ರೆಗೆ ಸೇರಿಸಿದೆವು ” ಅಂತ ಹತ್ತಾರು ಜನ ಸಾಕ್ಷಿ ಹೇಳಿದರೂ ಕೇಸು ನಿಲ್ಲೋದಿಲ್ಲ.
ಈ ಕೇಸಿನಲ್ಲಿ ಗಾಯವಾಗಲೀ , ಚಿಕಿತ್ಸೆಯಾಗಲಿ , ವೈದ್ಯರ ಪ್ರಮಾಣಪತ್ರವಾಗಲೀ ಏನೇನೂ ಇಲ್ಲ. ಬರೀ ಒಂದು ಫುಟೇಜು , ಆಡಿಯೋ ಅರಚಾಟ ಬಲವಾದ ಸಾಕ್ಷಿಯಾಗದು. ಗೀರು ಗಾಯವೂ ಆಗಿಲ್ಲವಲ್ರೀ ?!.

ಕೇಸು ಹಾಕಿದರೂ ಅಪರಾಧಿ ಸೆಲೆಬ್ರಿಟಿ , ಹಾರ ಹಾಕಿಸಿಕೊಂಡು , ಜೈಕಾರ ಕೂಗಿಸಿಕೊಂಡು ಆಚೆಗೆ ಬರುತ್ತಾನೆ. ಹೋಗಲಿ. ಕೇಸು ರಿಜಿಸ್ಟರ್ ಹಾಕಿರೋದರಿಂದ ಸೆಲೆಬ್ರಿಟಿ ಅರೆಸ್ಟಾಗಿ ಜೈಲು ಸೇರುತ್ತಾನಾ ? ಅಂದರೆ ಅದೂ ಆಗೋದಿಲ್ಲ.
ವಿಚಾರಣೆ ಸಲುವಾಗಿ ಪೊಲೀಸರು ” ಅರೆಸ್ಟ್ ಮಾಡಿದ್ದೇನೆ ” ಎಂದು ಹೇಳಬಹುದು. ಅದು ಪ್ರೊಸೀಜರ್. ಆದರೆ ವಿಚಾರಣೆ ಮಾಡಿದ ಮೇಲೆ ಸ್ವಂತ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಕಳಿಸಲೇ ಬೇಕು. ಇಂತಹ ಚಿಲ್ಲರೆ ಕೇಸಿನಲ್ಲಿ ಸೆಲೆಬ್ರಿಟಿ ಇರಲಿ ಯಾರನ್ನೂ ಸಹ ಲಾಕಪ್ಪಿನಲ್ಲಿ ಕೂರಿಸಲಾಗುವುದಿಲ್ಲ. ಯಾಕೆಂದರೆ ಬುಡಭದ್ರವಿಲ್ಲದ trivial ಚಿಲ್ಲರೆ ಕೇಸು ಇದು . ಕೃತ್ಯಕ್ಕೆ ಉಪಯೋಗಿಸಿದ್ದ ಎಂದು ಸೀಜ಼್ ಮಾಡಲು ಯಾವ ಚಾಕು ಚೂರಿಯೂ ಇಲ್ಲ. ಹೀಗಾಗಿ ಇಡೀ ಕಂಪ್ಲೇಂಟ್ ಯಾವನೋ ತಲೆಮಾಸಿದವನ ಪ್ರಲಾಪ.

” ಸದರಿ ಬೋಳುಗುಂಡನು ವಸೂಲಿ ಪತ್ರಕರ್ತನಾಗಿದ್ದು , ತನ್ನಿಂದ ಹಣ ಪೀಕುವ ಸಲುವಾಗಿ ಸುಳ್ಳು ಆಪಾದನೆಗಳ ಸುರಿಮಳೆ ಸುರಿಸಿದ್ದಾನೆ. ತನಗೆ ಏನೇನು ಸಂಬಂಧವಿಲ್ಲದ ಪ್ರಕರಣಗಳಲ್ಲಿ ಸಿಕ್ಕಿಸಿ , ತನ್ನ ಹೆಸರಿಗೆ ವಿನಾಕಾರಣ ಮಸಿಬಳಿದು ಅವಮಾನ ಮಾಡಿದ್ದಾನೆ. ತನ್ನ ವರ್ಚಸ್ಸನ್ನು ದುರುದ್ದೇಶಪೂರ್ವಕವಾಗಿ ಹಾಳುಗೆಡಹಿ ಮಾನಹಾನಿಯುಂಟುಮಾಡಿದ್ದಾನೆ. ಇದರಿಂದ ಸಾರ್ವಜನಿಕರಲ್ಲಿ ನನ್ನ ಬಗ್ಗೆ ತಿರಸ್ಕಾರ ಮೂಡಿ ನನ್ನ ಮಾರ್ಕೆಟ್ಟಿಗೆ ಧಕ್ಕೆಯಾಗಿದೆ. ಅನೇಕ ನಿರ್ಮಾಪಕರು ನನ್ನೊಂದಿಗೆ ಚಿತ್ರವನ್ನೇ ಮಾಡದೆ ಹಿಂದೆ ಸರಿದು ನನಗೆ ಅಪಾರವಾದ ಕಷ್ಟ ನಷ್ಟವಾಗಿದೆ. ಕೋಟ್ಯಾಂತರ ರೂಪಾಯಿಗಳ ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಸೆಲೆಬ್ರಿಟಿ ಒಂದು ಮಾನನಷ್ಟದ ಕೇಸನ್ನು ಜಡಿಯಬೇಕು. ಇತರ ಬೇರೆ ಬೇರೆ ಆಪಾದನೆಗಳನ್ನೂ ಸೇರಿಸಿ ಇನ್ನಷ್ಟು ಕೇಸು ಹಾಕಿದರೆ ಪೀತ ಪತ್ರಿಕರ್ತನ ಪುಂಗಿ ಬಂದಾಗಿ ಆಪಾದನೆ ಮಾಡಿದವನೇ ಕೋರ್ಟು ಕಛೇರಿ ಅಲೆಯುವಂತಾಗುತ್ತದೆ.

jk

ಕಾಲ ಮಿಂಚಿಲ್ಲ. ನಾಯಿ ಕೋಳಿಗಳ ಮಾತಿಗೆಲ್ಲಾ , ” ತಲೆ ತೆಗೀತೇನೆ , ಬುಡ ಕತ್ತರಿಸುತ್ತೇನೆ ” ಎಂದೆಲ್ಲಾ ವದರಿ ಎಗರಾಡಬೇಕಿಲ್ಲ. ಸೆಲಬ್ರಿಟಿಯೇ ಸೈಲೆಂಟಾಗಿ ಮಾನನಷ್ಟ ಮತ್ತು ಮಾರ್ಕೆಟ್ ನಷ್ಟಗಳ ಬಗ್ಗೆ ನಾನಾ ಕೇಸುಗಳನ್ನು ಸಕತ್ತಾಗಿ ಜಡಿದು ಬುದ್ದಿ ಕಲಿಸಬಹುದು ! .
ಸೆಲೆಬ್ರಿಟಿಯ ಕೃತ್ಯವನ್ನು ಸಮರ್ಥಿಸುತ್ತಿದ್ದೇನೆ ಎಂದಲ್ಲ. ಒಬ್ಬಾತನನ್ನು ಸುಳ್ಳು ಆಪಾದನೆಗಳಲ್ಲಿ ಹೇಗೆ ನರಳಿಸಬಹುದು ಎಂಬುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ.

ಮೊದಲು ರಕ್ತ ಕಾರುವಂತೆ ಹಲ್ಲೆ ಮಾಡಿದರು ಎಂದರು. ನಂತರ ಆತ ದಲಿತನಾದ. ಆಮೇಲಾತ ಇಪ್ಪತ್ತು ದಿನಗಳಿಂದ ಪ್ರಜ್ಞಾಶೂನ್ಯನಾಗಿ ಆಸ್ಪತ್ರೆಯಲ್ಲಿದ್ದಾನೆ ಎಂದರು. ಅದಾದ ಮೇಲೆ ಒಂದು ಕಣ್ಣೇ ಹೋಗಿದೆ. ಶಾಶ್ವತವಾಗಿ ಅಂಧನಾಗಿದ್ದಾನೆ ಎಂದು ಕರಾರುವಾಕ್ಕಾಗಿ ನುಡಿದರು. ಪಕ್ಕಾ ಆಡಿಯೋ , ವೀಡಿಯೋ ಸಾಕ್ಷ್ಯಾಧಾರಗಳಿವೆ ಪ್ರತಿಪಾದಿಸಿದರು.

file photo

ಸುಮ್ಮನಿದ್ದವನನ್ನು ಕೆರಳಿಸಿ , ಅವನಿಂದ ಹುಚ್ಚಾಪಟ್ಟೆ ಮಾತಾಡಿಸಿ ಮಾನ ತೆಗೆಯುವುದೇ ಪೀತನ ದುರುದ್ದೇಶ.
ಆ ಸೆಲಬ್ರಿಟಿಯೋ ಚಿಕ್ಕಪುಟ್ಟದಕ್ಕೆಲ್ಲಾ enrage ಆಗಿ ಎಗರಾಡಿಬಿಡುತ್ತಾನೆ ಎಂಬ ದೌರ್ಬಲ್ಯ ಪೀತನಿಗೆ ಗೊತ್ತಿದೆ. ಆದ್ದರಿಂದಲೇ ತನಗೆ ಸಂಬಂಧಿಸದ ವಿಚಾರದಲ್ಲಿ ದೊಡ್ಡ ಹಗರಣ ಮಾಡಿದ.ಕಡ್ಡಿಯನ್ನು ಗುಡ್ಡ ಮಾಡಿ ಸೆಲೆಬ್ರಿಟಿಯನ್ನು ಮಂಗ ಮಾಡಿದ.
ತಲೆ ತೆಗೆಯುತ್ತೆನೆ ಎಂದದ್ದು ಸರಿಯೇ.

ಆ ಮಾತು ಸರಿಯಲ್ಲ ಎಂದು ಯಾರಾದರೂ ಹೇಳುತ್ತಾರೆ. ರೆಕ್ಕೆ ಪುಕ್ಕಗಳನ್ನು ಕತ್ತರಿಸೋದು ಎಂಬ ಮಾತಿನ ಮುಂದುವರಿಕೆಯಾಗಿ ತಲೆ ತೆಗೆಯೋದು ಎಂಬುದು ಬಂತು. ಟೀವಿಗಳು ಅದೊಂದೇ ಮಾತನ್ನು ಹತ್ತುಬಾರಿ ತೋರಿದವು. ಎರಡೇ ತಿಂಗಳ ಹಿಂದೆ ಮರ್ಯಾದಸ್ಥನಾಗಿದ್ದ ಸೆಲೆಬ್ರಿಟಿಯ ಮಾನ ಮರ್ಯಾದೆ ಹರಾಜಾಯಿತು. ಸಂಚುಕೋರರ ದುರುದ್ದೇಶ ನೆರವೇರಿತು.

00000

key words : mysore-sandalwood-actor-darshan-challenging-star-kannada-crime