ಮೈಸೂರು: ಶ್ರಾವಣ ಶನಿವಾರಗಳಂದು ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ..

Promotion

ಮೈಸೂರು,ಜು,24,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಕೊರೋನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆ ಈ ಬಾರಿ ಶ್ರಾವಣ ಶನಿವಾರಗಳಂದು ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.jk-logo-justkannada-logo

ಕೋವೀಡ್-19 ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾಧಿಕಾರಿ  ಅಭಿರಾಂ ಜೀ ಶಂಕರ್  ಈ ಕ್ರಮ ಕೈಗೊಂಡಿದ್ದಾರೆ. ಜುಲೈ 25, ಆಗಸ್ಟ್1,ಆಗಸ್ಟ್ 8, ಮತ್ತು ಆಗಸ್ಟ್ 15 ರಂದು ದೇವಸ್ಥಾನಗಳಲ್ಲಿ ಜರುಗುವ ಎಲ್ಲಾ ರೀತಿಯ ಉತ್ಸವ, ಸೇವೆ ಮತ್ತು ಜಾತ್ರೆಗಳು ರದ್ದು ಮಾಡಲಾಗಿದೆ.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ,ಕೆ ಆರ್ ನಗರ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ದೇವಾಲಯ ಬಂದ್ ಆಗಲಿದ್ದು, ಉಳಿದಂತೆ ಧಾರ್ಮಿಕ ದತ್ತಿ ಇಲಾಖೆ, ಖಾಸಗಿ ಆಡಳಿತ ದೇವಾಲಯಗಳು ಕೂಡ ಬಂದ್ ಆಗಲಿದೆ.mysore-restriction-public-temples-shravana-saturdays

ಕೇವಲ ಧಾರ್ಮಿಕ ಕಾರ್ಯಕ್ರಮಕ್ಕೆ ಮಾತ್ರವೇ ಅನುಮತಿ ನೀಡಲಾಗಿದ್ದು, ದೇವಸ್ಥಾನದ ಅರ್ಚಕರು ಮಾತ್ರವೇ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಕುರಿತು ಪ್ರಕಟಣೆ ಮೂಲಕ ಡಿಸಿ ಅಭಿರಾಮ್ ಜಿ ಶಂಕರ್ ಮಾಹಿತಿ ನೀಡಿದ್ದಾರೆ.

Key words: Mysore-Restriction – public-temples – Shravana- Saturdays.