ದಸರಾ ಮೈಸೂರಿಗರಿಗೆ ಎಷ್ಟೊಂದು ದುಸ್ತರ : ‘ ಬಿಲ್ಡಪ್ ‘ ಗಳ ಭಾರದಲ್ಲಿ ನಲುಗುತ್ತಿದೆಯಾ ಮೈಸೂರು..!

Mysore-reeling-under-weight-of-its-own-buildups-Karnataka-bjp-government

Promotion

 

ಮೈಸೂರು, ಅಕ್ಟೋಬರ್ 19, 2021, (www.justkannada.in): ಸ್ವಚ್ಛ ನಗರ, ಸಾಂಸ್ಕೃತಿಕ ನಗರ, ಅರಮನೆಗಳ ನಗರಿ , ಸುಗಂಧ ಕಡ್ಡಿಗಳು ಹಾಗೂ ಗಂಧದ ನಗರ, ಪಾರಂಪರಿಕ ನಗರ, ಹಸಿರು ನಗರ, ಸಾಂಸ್ಕೃತಿಕ ರಾಜಧಾನಿ ಹಾಗೂ ಪ್ರವಾಸಿ ತಾಣ… ಹೀಗೆ ಹಲವಾರು ‘ ಬಿಲ್ಡಪ್ ‘ ಗಳ ತೂಕದಡಿ ಮೈಸೂರು ನಗರ ದಸರಾ ಸಂದರ್ಭದಲ್ಲಿ ತತ್ತರಿಸುತ್ತಿರುವಂತೆ ಭಾಸವಾಗುತ್ತಿದೆ.

ಹಲವಾರು ಸಕರಾತ್ಮಕ ಬ್ರ್ಯಾಂಡ್ ಗಳಿಂದ ಗುರುತಿಸಿಕೊಂಡಿರುವ ಮೈಸೂರು ನಗರ, ವಾಸ್ತವದಲ್ಲಿ ತನ್ನ ಸ್ವಂತ ನಾಮಾಂಕಿತ ಹಾಗೂ ಗುರುತುಗಳ ತೂಕದ ಅಡಿ ತತ್ತರಿಸುತ್ತಿದೆ. “ದಸರಾ ಮಹೋತ್ಸವದ ಸಮಯದಲ್ಲಿ ಪ್ರವಾಸಿಗರ ಮನರಂಜಿಸಲು ಹಾಗೂ ನಗರಕ್ಕೆ ಅಂಟಿಕೊಂಡಿರುವ ‘ಸುಳ್ಳು’ ಹೆಮ್ಮೆಯನ್ನು ತೋರ್ಪಡಿಸಲು ಮೈಸೂರಿನ ಸಾಮಾನ್ಯ ಜನರು ಕಷ್ಟಗಳನ್ನು ಅನುಭವಿಸಬೇಕಾಗುತ್ತಿದೆ.

ಕಳೆದ ಶುಕ್ರವಾರ, ವಿಜಯದಶಮಿಯ ಜಂಬೂಸವಾರಿ ಮೆರವಣಿಗೆ ಕಾರ್ಯಕ್ರಮದ ಬಳಿಕ ಮೈಸೂರಿನಲ್ಲಿ ವರುಣನ ಆರ್ಭಟ ಹಾಗೂ ಬೃಹತ್ ವಾಹನಗಳ ಸಂಚಾರ ದಟ್ಟಣೆ ಮೈಸೂರಿನ ನಿಜ ಸ್ವರೂಪದ ದರ್ಶನ ಮಾಡಿಸಿತು. ಪರಿಣಾಮ ಮೈಸೂರಿಗರು ಪರದಾಡಬೇಕಾಯಿತು. ಕೋವಿಡ್-೧೯ ಸಾಂಕ್ರಾಮಿಕದ ಬಿಕ್ಕಟ್ಟಿನಿಂದಾಗಿ ಈ ಬಾರಿ ಸರಳ ದಸರಾ ಆಚರಿಸಲಾಯಿತಾದರೂ ಸಹ ಮೈಸೂರಿನ ನಿವಾಸಿಗಳು ಈ ಮಟ್ಟಿಗಿನ ಕಷ್ಟಗಳನ್ನು ಎದುರಿಸಬೇಕಾದುದು ವಿಪರ್ಯಾಸ.

ಮಳೆಯಿಂದಾಗಿ ಮೈಸೂರಿನ ಬಹುಪಾಲು ಜನ ನಿಭಿಡ ರಸ್ತೆಗಳು ಜಲಾವೃತ್ತಗೊಂಡಿದ್ದವು, ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಹಬ್ಬವಿರಲಿ ಅಥವಾ ಸಾಮಾನ್ಯ ದಿನವಾಗಲೀ ಮೈಸೂರಿನ ಸಾಮಾನ್ಯ ಜನರು ದೈನಂದಿನ ಬದುಕು ಸಾಗಿಸಲು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು.

ದೀಪಾಲಂಕಾರವೆಂಬ ಭ್ರಮಾಲೋಕ :

ಮೈಸೂರು ನಗರದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸದಿದ್ದರೂ ಸರಿ, ಅಧಿಕಾರಿಗಳು ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಅವೈಜ್ಞಾನಿಕ ದೀಪಾಲಂಕಾರದ ಹೆಸರಿನಲ್ಲಿ ಹಲವು ರಸ್ತೆಗಳು ಹಾಗೂ ಚರಂಡಿಗಳೇ ಕಣ್ಮರೆಯಾಗಿವೆ.
ಮೈಸೂರು ‘ ವೆಲ್ ಪ್ಲಾನ್ಡ್ ಸಿಟಿ ಹಾಗೂ ಸ್ವಚ್ಛ ನಗರ ‘ ಎನ್ನುವುವಾದರೆ, ಮಳೆ ಬಂದಾಗ ರಸ್ತೆಗಳ ಮೇಲೆ ನೀರೇಕೆ ನಿಲ್ಲುತ್ತದೆ,..? ಏಕೆ ಅಷ್ಟು ಪ್ರಮಾಣದಲ್ಲಿ ಹರಿಯುತ್ತಿರುತ್ತದೆ.? ಮಳೆನೀರು, ಚರಂಡಿ ನೀರಿನ ಜೊತೆ ಸೇರಿ ಮನೆಗಳಿಗೆ ಏಕೆ ನುಗ್ಗುತ್ತದೆ..?

ಪ್ರವಾಸಿ ತಾಣ ಎನಿಸಿಕೊಂಡಿರುವ ಕಾರಣದಿಂದಾಗಿ ಮೈಸೂರಿಗರು ಎದುರಿಸಬೇಕಾಗುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಅಂದರೆ, ಅಗತ್ಯ ವಸ್ತುಗಳ ದರಗಳಲ್ಲಿ ತೀವ್ರ ಹೆಚ್ಚಳ ಹಾಗೂ ಕೆಲ ಆಟೊ ಮತ್ತು ಟ್ಯಾಕ್ಸಿಗಳ ಚಾಲಕರಿಂದ ಸುಲಿಗೆ. ಅಂಬಾವಿಲಾಸ ಅರಮನೆಯ ಬಳಿಯೇ ನಗರ ಬಸ್ ನಿಲ್ದಾಣ ಇರುವ ಕಾರಣದಿಂದಾಗಿ, ದಸರಾ ಸಮಯದಲ್ಲಿ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ. ಇದರಿಂದ ಜನತೆ ಬದಲಿ ಸಂಚಾರ ವ್ಯವಸ್ಥೆ ಅವಲಂಭಿಸುವುದು ಅನಿವಾರ್ಯ.

ಸಂಚಾರಿ ಸಿಗ್ನಲ್‌ಗಳ ಬಳಿ ಭಿಕ್ಷಕರು ಹಾಗೂ ಮಂಗಳಮುಖಿಯರ ಉಪಟಳವೂ ಹೆಚ್ಚಾಗಿರುತ್ತದೆ. ಫುಟ್‌ಪಾತ್‌ಗಳ ಮೇಲೆ ಓಡಾಡುವವರು ಹಾಗೂ ಪ್ರವಾಸಿಗರಿಗೆ ಕಾಟ ನೀಡುತ್ತಾರೆ. ಇದರ ಜತೆಗೆ ಕೆಲ ಪುಂಡುಪೋಕರಿಗಳು ವುವುಜೆಲಾ (ತುತ್ತೂರಿ) ಕರ್ಕಶ ಶಬ್ಧದ ಮೂಲಕ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಕಿರಿಕಿರಿ ಮಾಡುತ್ತಿರುತ್ತಾರೆ. ಇದು ಎಷ್ಟರ ಮಟ್ಟಿಗೆ ಅಂದ್ರೆ, ಮೈಸೂರು ನಗರ ಪೊಲೀಸ್ ಆಯುಕ್ತರೇ ವುವುಜೆಲಾ ಬಳಕೆ ಮೇಲೆ ನಿರ್ಬಂಧ ಹೇರಿ ಆದೇಶ ಹೊರಡಿಸುತ್ತಾರೆ ಅಂದ್ರೆ ನೀವೆ ಅರ್ಥ ಮಾಡಿಕೊಳ್ಳಿ..!

key words : Mysore-reeling-under-weight-of-its-own-buildups-Karnataka-bjp-government