ಮೈಸೂರಿಗೆ ಆಗಮಿಸಿದ ರಿಯಲ್ ಸ್ಟಾರ್ ಉಪೇಂದ್ರರನ್ನ ನೋಡಲು ಮುಗಿಬಿದ್ದ ಅಭಿಮಾನಿಗಳು…

Promotion

ಮೈಸೂರು,ಜೂ,30,2019(www.justkannada.in): ಐ ಲವ್ ಯು  ಚಿತ್ರದ ಪ್ರಮೋಷನ್ ಗೆ ಮೈಸೂರಿಗೆ ಆಗಮಿಸಿದ ನಟ ರಿಯಲ್ ಸ್ಟಾರ್ ಉಪೇಂದ್ರ  ಅವರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದ ಘಟನೆ ನಡೆಯಿತು.

ಐ ಲವ್ ಯು  ಚಿತ್ರದ ಪ್ರಮೋಷನ್ ಗೆ ನಗರದ ಗಾಯತ್ರಿ ಚಿತ್ರಮಂದಿರಕ್ಕೆ ನಟ ರಿಯಲ್ ಸ್ಟಾರ್ ಉಪೇಂದ್ರ  ಭೇಟಿ ನೀಡಿದ್ದರು. ಈ ವೇಳೆ  ತಮ್ಮ ನೆಚ್ಚಿನ ನಟನನ್ನು ಕಂಡು ಉಪ್ಪಿ ಫ್ಯಾನ್ಸ್ ಜೈಕಾರ ಹಾಕಿದರು. ಜತೆಗೆ ನಟ ಉಪೇಂದ್ರ ಅವರ ಜತೆ ಸೆಲ್ಫಿಗೆ ಮುಗಿಬಿದ್ದರು.

ಬಳಿಕ ಮಾತನಾಡಿದ ನಟ ಉಪೇಂದ್ರ, ರಾಜ್ಯಾದ್ಯಂತ ಐಲವ್ ಯು ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಮೈಸೂರು ಸೇರಿದಂತೆ ಇತರೆ ಜಿಲ್ಲೆಗಳಿಗೂ ಚಿತ್ರದ ಪ್ರಮೋಷನ್ ಗೆ ತೆರಳಿದ್ದೇನೆ. ಸದ್ಯ ಚಿತ್ರದ ಪ್ರಮೋಷನ್ ಗೆ ನಾನೊಬ್ಬನೇ  ಬಂದಿದ್ದೇನೆ ಮುಂದಿನ ದಿನಗಳಲ್ಲಿ ನಿರ್ದೇಶಕರು ಸೇರಿದಂತೆ ಚಿತ್ರತಂಡದ ಟೀಮ್ ರಾಜ್ಯಾದ್ಯಂತ ಪ್ರವಾಸಗೊಳ್ಳಲಿದೆ ಎಂದರು.

ಇದೆ ವೇಳೆ ರಾಜಕೀಯ ವಿಚಾರಗಳಿಗೆ ಪ್ರತಿಕ್ರಿಯೆ ನೀಡಿದ ನಟ ಉಪೇಂದ್ರ, ಪ್ರಜಾಕೀಯದ ಧ್ಯೇಯೋದ್ದೇಶಗಳನ್ನ  ಸಿನಿಮಾ ಮಾಡಲಾರೆ, ಪಕ್ಷದ ಉದ್ದೇಶ ಜನರಿಗೆ ತಲುಪಲು ಸಾಕಷ್ಟು ವರ್ಷಗಳು ಬೇಕು. ದೇಶದಲ್ಲಿ ವ್ಯಕ್ತಿಕೇಂದ್ರಿತ ಅಥವಾ ಪಕ್ಷ ಕೇಂದ್ರಿತ ಚುನಾವಣೆ ನಡೆಯಬಾರದು. ವಿಚಾರಗಳ ಮೇಲೆ ಚುನಾವಣೆ ನಡೆಯುವ ಕಾಲ ಬಂದೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: Mysore – real star- Upendra- Fans