ಲಿಂಗಾಂಬುದಿ ಕೆರೆ ನೀರು ಹೋಗುವ ತೂಬುಗಳು ಬಂದ್: ಮಳೆ ಮುಂದುವರೆದರೆ ಮೈಸೂರಿಗೆ ಜಲ ಗಂಡಾಂತರ..?

Promotion

ಮೈಸೂರು,ಅಕ್ಟೋಬರ್,28,2021(www.justkannada.in):  ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸುರಿದ ಮಹಾಮಳೆ ಅವಾಂತರವನ್ನೇ ಸೃಷ್ಠಿಸಿದ್ದು, ಈ ಮಧ್ಯೆ ಹೀಗೆಯೆ ಮಳೆ ಮುಂದುವರೆದರೆ ಮೈಸೂರಿಗೆ ಜಲ ಗಂಡಾಂತರ ಎದುರಾಗುವ ಸಾಧ್ಯತೆ ಇದೆ.

ಹೌದು, ಏಕೆಂದರೇ ಭೂ ಬಕಾಸೂರುರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾಯ್ತು ಇದೀಗ ಕೆರೆ ತೂಬನ್ನೂ ಸಹ ನುಂಗಿದ್ದಾರೆ. ಹೌದು,ಲೇಔಟ್ ನಿರ್ಮಾಣಕ್ಕಾಗಿ ಲಿಂಗಾಂಬುದಿ ಕೆರೆ ನೀರು ಹೋಗುವ ತೂಬುಗಳು ಬಂದ್ ಆಗಿವೆ.  ಕಾಂಕ್ರೀಟ್ ನಿಂದಾಗಿ  ಲಿಂಗಾಬುದಿ ಕೆರೆ ಏರಿಯ ಎರಡು ತೂಬುಗಳ ಬಂದ್ ಆಗಿದ್ದು, ಕೆರೆಯಿಂದ ನೀರು ಹೊರಹೋಗಲಾಗದೆ ಏರಿ ಒಡೆಯುವ ಭೀತಿ ಉಂಟಾಗಿದೆ.

ಮಹಾಮಳೆಯಿಂದ ಲಿಂಗಾಂಬುದಿಕೆರೆ ಸಂಪೂರ್ಣ ಭರ್ತಿಯಾಗದ್ದು, ಹೆಚ್ಚುವರಿ ನೀರು ಹೊರಹೋಗುವ ಕೋಡಿ ಭಾಗವೂ ಬಂದ್ ಆಗಿರುವುದರಿಂದಾಗಿ ಕೆರೆಯಿಂದ ನೀರು ಹೊರಹೋಗಲಾಗದೆ ಏರಿ ಒಡೆಯುವ ಭೀತಿ ಎದುರಾಗಿದೆ. ಇನ್ನು ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದರೂ ಸಹ ಸಮಸ್ಯೆ ಬಗೆಹರಿಸದೆ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Key words: mysore- rain- lingabudi lake-damage

ENGLISH SUMMARY…

Mysuru rains: Lingamubdi tank sluices blocked
Mysuru, October 28, 2021 (www.justkannada.in): The rains which lashed Mysuru city recently have created havoc. In the meantime, it is suspected that the city will be in danger if it continues to rain for a few more days.
Several rainwater drainages have been encroached by people involved in the land mafia. Not only that, the land mafia has not spared even the tank sluice. Two sluices leading to the Lingamubdi tank are blocked with concrete, blocking the outflow of water. It has triggered panic among the citizens who fear breaching the tank bund.
The Lingambudi tank in Mysuru is brimming with water due to the incessant rains. But as the sluices of the tank that helps outflow of additional water are blocked, causing an alarm. It has triggered panic among the residents in the surrounding areas, as the tank bund might breach anytime. In the meanwhile, the citizens have complained that officials concerned have not taken any action though they have been informed.
Keywords: Incessant rains/ Mysuru/ Lingambudi tank/ danger