ಮೈಸೂರು ಜಿಲ್ಲೆಯಲ್ಲೂ ವರುಣನ ಅಬ್ಬರ: ಮೂರು ಮನೆಗಳು ಕುಸಿತ: ಅಪಾರ ಪ್ರಮಾಣದ ಬೆಳೆ ಹಾನಿ…

Promotion

ಮೈಸೂರು,ಆ,7,2019(www.justkannada.in): ರಾಜ್ಯದಲ್ಲಿ ಸುರಿಯುತ್ತಿರುವ ಮಹಾಮಳೆಗೆ ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳು ತತ್ತರಿಸಿದ್ದು, ಈ ನಡುವೆ ಮೈಸೂರಿನಲ್ಲೂ ವರುಣನ ಅಬ್ಬರ ಜೋರಾಗಿದೆ.

ಮೈಸೂರು ಜಿಲ್ಲೆಯಲ್ಲೂ ಜಿಟಿ ಜಿಟಿ ಮಳೆಯಾಗುತ್ತಿದ್ದು , ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ತಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ  ಮಳೆಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಹುಣಸೂರು ತಾಲೂಕಿನಲ ಕಚುವಿನಹಳ್ಳಿ ಶಿವಣ್ಣೇಗೌಡ, ಬಿಲ್ಲೇನಹಳ್ಳಿ ರಾಜಯ್ಯ, ನೇರಳಹಳ್ಳಿ ಗಿರಿಜನ ಹಾಡಿ ಸಣ್ಣಪ್ಪ ಅಲಿಯಾಸ್ ಸಣ್ಣ ಅವರ ಮನೆ ಕುಸಿದಿದೆ. ಇದರಿಂದಾಗಿ  ಬಡ ಕುಟುಂಬಗಳು ಸೂರಿಲ್ಲದೆ ಬೀದಿ ಪಾಲಾಗಿದ್ದಾರೆ.

ವರುಣನ ರುದ್ರ ನರ್ತನದಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಹುಣಸೂರು ತಾಲೂಕಿನ ಮುದುಗನೂರಿನಲ್ಲಿ ಎರಡು ಎಕರೆ ಜಮೀನಲ್ಲಿ ಶಿವಕುಮಾರ್ ಎಂಬ ರೈತ ಬೆಳೆದಿದ್ದ ಶುಂಠಿ  ಬೆಳೆ ಮಳೆಯಲ್ಲಿ ಮುಳುಗಿಹೋಗಿದೆ. ಶುಂಠಿಬೆಳೆ ನೀರಿನಲ್ಲಿ ಮುಳುಗಿರುವ ಹಿನ್ನೆಲೆ ರೈತ ಕಂಗಾಲಾಗಿದ್ದಾನೆ.

key words: mysore –rain-house-felldown- Crop-damage