ಮೈಸೂರು: ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿದ ಪೇಜಾವರ ಶ್ರೀಗಳು….

Promotion

ಮೈಸೂರು,ಸೆ,11,2019(www.justkannada.in): ಪೇಜಾವರ ಶ್ರೀಗಳು ಮೈಸೂರಿನಲ್ಲಿ  ದಲಿತ ಕೇರಿಯಲ್ಲಿ ಸಾಮರಸ್ಯದ ಪಾದಯಾತ್ರೆ ಮಾಡಿದರು.

ಮೈಸೂರಿನ ಮಂಜುನಾಥಪುರ ಬಡಾವಣೆಯ ದಲಿತರ ಮನೆಗೆ ಪೇಜಾವರ ಶ್ರೀಗಳು ಭೇಟಿ ನೀಡಿದರು. ಚೌಡಪ್ಪ, ರಾಜಮ್ಮ ಎಂಬುವರ ದಂಪತಿಯ ಮನೆಗೆ ಭೇಟಿ ನೀಡಿದ ಪೇಜಾವರ ಶ್ರೀಗಳಿಗೆ ಅಲ್ಲಿನ ಕುಟುಂಬಸ್ಥರು  ಗೌರವಿಸಿ ಆರ್ಶಿವಾದ ಪಡೆದರು.

ದಲಿತರ ಮೇಲಿನ ಶೋಷಣೆ ಕುಗ್ಗಿಸಲು ಸಾಮರಸ್ಯ ಪಾದಯಾತ್ರೆ ನಡೆಸಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ವೀಲ್ ಚೇರ್‌ನಲ್ಲಿ ಕುಳಿತೆ ಪೇಜಾವರ ಶ್ರೀಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಮಾಜಿಸಚಿವ ಡಿಕೆಶಿ ಪರ ಮಠಾಧೀಶರ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಪೇಜಾವರ ಶ್ರೀಗಳು. ನಾನು ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ, ತಟಸ್ಥವಾಗಿರುತ್ತೇನೆ. ಅವರಿಗೆ ಡಿಕೆಶಿ ನಿರಪರಾಧಿ ಅಂತ ತೋರಿದೆ. ಆ ಕಾರಣದಿಂದ ಅವರು ಬೆಂಬಲಿಸುತ್ತಿರಬಹುದು. ಈ ವಿಚಾರದಲ್ಲಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.

Key words: Mysore- pejavar shri- padayatre- Dalit Keri.