“ಮೈಸೂರು ಅರಮನೆ ಅಂಗಳದ ಧ್ವನಿ ಮತ್ತು ಬೆಳಕು” ನಾಳೆಯಿಂದ ಮತ್ತೆ ಶುರು

Promotion

ಬೆಂಗಳೂರು,ಮಾರ್ಚ್,14,2021(www.justkannada.in) : ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಾಳೆಯಿಂದ ಮತ್ತೆ ಶುರುವಾಗಲಿದೆ. jk

ಕೊರೊನಾ ಕಾರಣದಿಂದ ಅರಮನೆ ಮಂಡಳಿಯು ಈ ಕಾರ್ಯಕ್ರಮವನ್ನು ರದ್ದು ಪಡಿಸಿತ್ತು. ಇದೀಗ ನಾಳೆಯಿಂದಲೇ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಪುನರಾರಂಭವಾಗಲಿದೆ.

ಸಂಜೆ 7ರಿಂದ 8ರವರೆಗೆ ಕಾರ್ಯಕ್ರಮ

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ. ಸೋಮವಾರ, ಮಂಗಳವಾರ, ಬುಧವಾರಗಳಂದು ಸಂಜೆ 7ರಿಂದ 8ರವರೆಗೆ ಕಾರ್ಯಕ್ರಮ ನಡೆಯಲಿದೆ.

Mysore-Palace-Sound and Light-tomorrow-Again-Start

ವಯಸ್ಕರಿಗೆ 70 ರೂ., ಮಕ್ಕಳಿಗೆ 30 ರೂ. ಪ್ರವೇಶ ದರ ನಿಗದಿ. ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.

key words : Mysore-Palace-Sound and Light-tomorrow-Again-Start