ನಾಳೆಯಿಂದ ಮೈಸೂರು ಅರಮನೆ ದೀಪಾಲಂಕಾರ ಪುನಾರಂಭ

Promotion

ಮೈಸೂರು, ಜುಲೈ 24, 2021 (www.justkannada.in): ನಾಳೆಯಿಂದ ಮೈಸೂರು ಅರಮನೆ ದೀಪಾಲಂಕಾರ ಪುನರಾರಂಭವಾಗಲಿದೆ.

ಅರಮನೆ ಆವರಣದಲ್ಲಿ ಸಂಜೆ ವೇಳೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಶುರುವಾಗಲಿದೆ. ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಕಾರ್ಯಕ್ರಮಗಳಿಗೆ ಮತ್ತೆ ಚಾಲನೆ ಸಿಗಲಿದೆ.

ಇದೀಗ ಅನ್ಲಾಕ್‌ ಬಳಿಕ ಮತ್ತೆ ಫುನಾರಾರಂಭ ಮಾಡುತ್ತಿರುವ ಅರಮನೆ ಮಂಡಳಿ. ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ ಪುನಾರಂಭಿಸಲು ಸಿದ್ಧತೆ ನಡೆಸಿದೆ.

ರಾತ್ರಿ 7ರಿಂದ 8ರ ವರೆಗೆ ಮತ್ತೆ ಮೈಸೂರು ಅರಮನೆ ಜಗಮಗಿಸಲಿದೆ. ಇನ್ನುಳಿದ ದಿನಗಳು ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಮತ್ತೆ ಶುರುವಾಗಲಿವೆ.

ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ7ರಿಂದ 8 ಹಾಗೂ ಶನಿವಾರ 7ರಿಂದ 9.15ರ ವರಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಪ್ರವಾಸೋದ್ಯಮ ಹಿತದೃಷ್ಟಿಯಿಂದ ದೀಪಾಲಂಕಾರ ಫುನರಾರಂಭಿಸಲಾಗುತ್ತಿದೆ.