ದಸರಾಗೂ ಮುನ್ನವೇ ಅರಮನೆ ಆನೆಗಳು ಗುಜರಾತಿಗೆ.

ಮೈಸೂರು,ಸೆಪ್ಟಂಬರ್,21,2021(www.justkannada.in):  ಮೈಸೂರು ದಸರಾ ಆರಂಭಕ್ಕೆ ಇನ್ನ 15 ದಿನಗಳು ಬಾಕಿ ಇದ್ದು ಇದಕ್ಕೂ ಮುನ್ನವೇ ಅರಮನೆಯ ಆನೆಗಳನ್ನ ಗುಜರಾತಿಗೆ ಶಿಫ್ಟ್ ಮಾಡಲು ನಿರ್ಧರಿಸಲಾಗಿದೆ.

ಆರೋಗ್ಯ ದೃಷ್ಟಿಯಿಂದ ಅರಮನೆಯ ನಾಲ್ಕು ಆನೆಗಳಾದ ಸೀತಾ,ರೂಬಿ,ಜಮಿನಿ ಮತ್ತು ರಾಜೇಶ್ವರಿ ಆನೆಗಳನ್ನ ಗುಜರಾತಿನ‌ ಪುನರ್ವಸತಿ ಕೇಂದ್ರಕ್ಕೆ ರವಾನೆ ಮಾಡಲು ತೀರ್ಮಾನಿಸಲಾಗಿದೆ. ಒಡೆಯರ್ ಅವರು ಜೆಮಿನಿ ಸರ್ಕಸ್ ನಿಂದ ಆನೆಗಳನ್ನು ವಶಕ್ಕೆ ಪಡೆದು ಆಶ್ರಯ ನೀಡಿದ್ದರು.  ಆರು‌ ಆನೆಗಳ ಫೈಕಿ ನಾಲ್ಕು‌ ಆನೆಗಳು ಗುಜರಾತಿಗೆ ಶಿಫ್ಟ್ ಮಾಡಿ ಎರಡು ಆನೆಗಳನ್ನ‌ ಮಾತ್ರ ಉಳಿಸಿಕೊಳ್ಳುಲು ನಿರ್ಧರಿಸಲಾಗಿದೆ.

ಇನ್ನು ಸದ್ಯದಲ್ಲೇ ಆನೆಗಳನ್ನು ಸಾಗಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಆನೆ ಸಾಗಿಸುವ ಸಂಬಂಧ ಡಿಸಿಎಫ್ ಕೆ ಕಮಲಾ ಕರಿಕಾಳನ್ ಗೆ ಕೇಂದ್ರ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದಾರೆ. ವನ್ಯಜೀವಿ ರಕ್ಷಣಾ ಸಂಸ್ಥೆಯಿಂದಲೂ ಪತ್ರ ರವಾನಿಸಲಾಗಿದ್ದು, ನಾಲ್ಕು ಆನೆಗಳ ಆರೋಗ್ಯ ತಪಾಸಣೆ ನಡೆಸಿದ ಬಳಿಕವೇ ಗುಜರಾತಿಗೆ ಶಿಪ್ಟ್ ಮಾಡಲಾಗುತ್ತದೆ.

Key words: mysore-Palace -elephants –shift-Gujarat-  before -Dasara.

ENGLISH SUMMARY…

Palace elephants to be shifted to Gujarat before Dasara
Mysuru, September 21, 2021 (www.justkannada.in): There are still 15 days left for the world-famous Mysuru Dasara. But it is decided to shift the Palace elephants to Gujarat.
A decision has been taken to shift the palace elephants Seetha, Rubi, Gemini and Rajeshwari to the rehabilitation center located in Gujarat keeping in mind the health aspect of these elephants. Srikantadatta Wadiyar had brought these elephants from the Gemini Circus and was looking after them here. It is decided to shift four out of the total six elephants to Gujarat.
It is learnt that the process of shifting of these elephants will begin soon. Senior officials of the Central Forest Department have written a letter regarding shifting of the elephants, to the Deputy Conservator of Forests K. Kamala Karikalan. A letter has also been sent from the Wildlife Protection Institute. These elephants will be shifted only after inspecting its health condition.
Keywords: Mysuru/ Palace elephants/ health condition/ shifted/ Gujarat/ before Dasara