ಮೈಸೂರು ಪಾಕ್ ನಮ್ಮದೇ… ನೂರಕ್ಕೆ ನೂರರಷ್ಟು ಇದು ನಮ್ಮದೇ… ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ…

Promotion

ಮೈಸೂರು,ಸೆ,18,2019(www.justkannada.in): ಮೈಸೂರು ಪಾಕ್ ತಮಿಳುನಾಡಿನದ್ದು ಎಂದು  ಸುದ್ದಿ ಹರಡಿದ ಹಿನ್ನೆಲೆ ಮೈಸೂರು ಪಾಕ್ ನಮ್ಮದೇ, ನಮ್ಮದೇ, ನಮ್ಮದೇ. ನೂರಕ್ಕೆ ನೂರರಷ್ಟು ಇದು ನಮ್ಮದೇ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ರೈಲ್ವೆ ನಿಲ್ದಾಣ ಬಳಿ ಮೈಸೂರು ಪಾಕ್ ನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದರು.  ನೀವೆನಾದ್ರೂ ಮತ್ತೆ ಮೈಸೂರ ಪಾಕ್  ನಮ್ಮದೇ ಅಂದ್ರೆ ಯುದ್ದ ಮಾಡಬೇಕಾಗುತ್ತದೆ ಎಂದು ತಮಿಳುನಾಡಿಗೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ತಮಿಳುನಾಡಿನವರು ಇದೇ ರೀತಿ ಕ್ಯಾತೆ ತಗೆದ್ರೆ ಮೈಸೂರು ಪಾಕ್ ನ್ನು ತಮಿಳುನಾಡಿಗೆ ಸರಬರಾಜು ಮಾಡುವುದಿಲ್ಲ. ತಮಿಳುನಾಡಿನವರೇ ಕಾವೇರಿ, ಮೇಕದಾಟು ಬಳಿಕ ಇಂದು ಮೈಸೂರು ಪಾಕ್ ಗೆ ಕೈ ಹಾಕಿದ್ದೀರ್ರಾ. ಇದು ಸರಿಯಿಲ್ಲ ಎಂದು ತಮಿಳುನಾಡು ವಿರುದ್ದ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

Key words: Mysore Pak – ours-Vatal Nagaraj –protest-mysore