ರಾಜ್ಯದಲ್ಲಿ ಪ್ರಸ್ತುತ ಲಾಕ್‌ ಡೌನ್‌ ಮುಂದುವರೆದಿರುವ ಏಕೈಕ ಜಿಲ್ಲೆ ಮೈಸೂರು.

ಮೈಸೂರು, ಜೂನ್ 27, 2021(www.justkannada.in): ಮೈಸೂರು ಜಿಲ್ಲೆಯೊಂದನ್ನು ಹೊರತುಪಡಿಸಿದಂತೆ ಕರ್ನಾಟಕ ರಾಜ್ಯದಲ್ಲಿರುವ ಇತರೆ ಎಲ್ಲಾ ಜಿಲ್ಲೆಗಳಲ್ಲೂ ಸಹ ಕೋವಿಡ್-19 ಸೋಂಕು ಇಳಿಕೆ ಕಂಡಿದ್ದು ಸಂಪೂರ್ಣ ಲಾಕ್‌ಡೌನ್‌ನಿಂದ ಮುಕ್ತವಾಗಿವೆ.

ಮಂಗಳವಾರದಂದು ರಾಜ್ಯದ ಒಟ್ಟಾರೆ ಪರೀಕ್ಷಾ ಪಾಸಿಟಿವಿಟಿ ಪ್ರಮಾಣ 2.87ರಷ್ಟಿದ್ದರೆ, ಮೈಸೂರಿನಲ್ಲಿ ಶೇ.8.4ರಷ್ಟಿತ್ತು. ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಟಿಪಿಆರ್ ಪ್ರಮಾಣ ಸ್ವಲ್ಪ ಪ್ರಮಾಣದ ಮಾತ್ರ ಇಳಿಕೆಯಾಗಿದೆ. ವಾರಾಂತ್ಯದಲ್ಲಿ ಇದರ ಪ್ರಮಾಣ 10%ರಷ್ಟಿತ್ತು. ಈ ಪ್ರಕಾರವಾಗಿ ಇಡೀ ರಾಜ್ಯದಲ್ಲಿ ಮೈಸೂರು ಲಾಕ್‌ ಡೌನ್ ಇನ್ನೂ ಮುಂದುವರೆದಿರುವ ಏಕೈಕ ಜಿಲ್ಲೆಯಾಗಿದೆ.

ಈವರೆಗೆ ಮೈಸೂರು ಜಿಲ್ಲೆಯಲ್ಲಿ 1.65 ಲಕ್ಷ ಕೋವಿಡ್-19 ಸೋಂಕಿನ ಪ್ರಕರಣಗಳ ದಾಖಲಾಗಿದ್ದು, ಅಧಿಕೃತವಾಗಿ ೨,೦೪೬ ಜನರು ಸಾವನ್ನಪ್ಪಿದ್ದಾರೆ. ಈ ವರ್ಷದ ಏಪ್ರಿಲ್ ತಿಂಗಳ ಎರಡನೇ ವಾರದಿಂದ ಅಂದರೆ ಕೋವಿಡ್ ಸೋಂಕಿನ ಎರಡನೆಯ ಅಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಸೋಂಕು ಪ್ರಕರಣಗಳು ದಾಖಲಾಗಿದ್ದು, 936 ಜನರು ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆಗೆ ಮಾತ್ರ ಲಾಕ್‌ ಡೌನ್‌ನಿಂದ ಏಕೆ ಮುಕ್ತಿ ಕಲ್ಪಿಸಲಾಗಿಲ್ಲ ಎಂಬ ಅಂಶವನ್ನು ಗಮನಿಸಿದರೆ, ಮೈಸೂರು ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹಿಂದೆ ದಾಖಲಾಗಿದ್ದಂತಹ ಅತೀ ಹೆಚ್ಚಿನ ಸಂಖ್ಯೆ ೧೪,೬೦೬ ರಿಂದ ಪ್ರಸ್ತುತ ೬,೧೨೨ ಪ್ರಕರಣಗಳಿಗೆ ಇಳಿಕೆಯಾಗಿದ್ದರೂ ಸಹ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜೂನ್ ತಿಂಗಳ ಆರಂಭದಲ್ಲಿ ಇದ್ದಂತಹ ಶೇ.22 (೨೨೫೨) ಸಂಖ್ಯೆಯ ಹೋಲಿಕೆಯಲ್ಲಿ, ಜೂನ್ 22ರಂದಿಗೆ ಶೇ.27ರಷ್ಟು (೧೭೬೨ ರೋಗಿಗಳು) ಕೋವಿಡ್ ಸೋಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ೪೦೭ ಜನರು ಸೋಂಕಿನಿಂದ ಮೃತಪಟ್ಟಿದ್ದು, ರಾಜ್ಯದ 30 ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯ ನಂತರ ಸ್ಥಾನದಲ್ಲಿ, ಅಂದರೆ 2ನೇ ಸ್ಥಾನದಲ್ಲಿದೆ.

ಈ ಕುರಿತು ಮಾಹಿತಿ ಒದಗಿಸಿರುವ ಮೈಸೂರು ಜಿಲ್ಲೆಯ ಆರೋಗ್ಯ ಅಧಿಕಾರಿ ಡಾ. ಕೆ.ಹೆಚ್. ಪ್ರಸಾದ್ ಅವರು ರಾಜ್ಯದ ಇತರೆ ಜಿಲ್ಲೆಗಳ ಹೋಲಿಕೆಯಲ್ಲಿ ಮೈಸೂರು ಜಿಲ್ಲೆಯ ಹೊಸ ಕೋವಿಡ್ ಸೋಂಕಿನ ಪ್ರಕರಣಗಳು ಹಾಗೂ ಮರಣ ಪ್ರಮಾಣದ ಗತಿ ನಿಧಾನವಾಗಿದೆ. “ಆದಾಗ್ಯೂ, ನಾವು ಹೆಚ್ಚು ಸೋಂಕನ್ನು ಗುರುತಿಸುವ ಸಲುವಾಗಿ ನಾವು ಪರಿಷ್ಕೃತ ಕಾರ್ಯತಂತ್ರವಾಗಿ ಗುಣಾತ್ಮಕ ಪರೀಕ್ಷೆಗಳನ್ನು ಗುರುತಿಸಿದ್ದೇವೆ. ಈ ವಿಧಾನದ ಮೂಲಕ ಸೋಂಕಿಗೆ ಈಡಾಗುವ ಹೆಚ್ಚಿನ ಸಂಭವವಿರುವ ನಿರ್ಧಿಷ್ಟವಾದ ಜನಸಂಖ್ಯೆಯ ಕಡೆ ಹೆಚ್ಚಿನ ಗಮನ ನೀಡುತ್ತಿದ್ದೇವೆ. ದೂರವಾಣಿ ಮೂಲಕ ಗುರುತಿಸುವ ಗತಿಗೆ ವೇಗ ನೀಡುವುದು ಹಾಗೂ ಮನೆ ಮನೆಗೆ ತೆರಳಿ ನಿಗಾವಹಿಸುವುದು ಒಳಗೊಂಡಂತೆ ಸಮುದಾಯ ತಪಾಸಣೆಯಗೆ ವೇಗ ನೀಡುವ ಮೂಲಕ ವಿನೂತನ ದೃಷ್ಟಿಕೋನವನ್ನು ಅಳವಡಿಸಿಕೊಂಡಿದ್ದೇವೆ,” ಎಂದು ವಿವರಿಸಿದರು.

ಸುದ್ದಿ ಮೂಲ: ಇಂಡಿಯನ್ ಎಕ್ಸ್ ಪ್ರೆಸ್

Key words: Mysore – only -district – continued – lock down.