ತಮಗೆ ಕೋವಿಡ್ ಪಾಸಿಟಿವ್ ಇದ್ದಿದ್ದು ಗೊತ್ತಿದ್ರೂ ಬಸ್ ನಲ್ಲಿ ಪ್ರಯಾಣ: ಸೋಂಕಿತರ ತಪ್ಪಿನಿಂದ ಇದೀಗ ಪ್ರಯಾಣಿಕರಿಗೆ ಸಂಕಷ್ಟ…..

Promotion

ಮೈಸೂರು,ಜು,7,2020(www.justkannada.in): ತಮಗೆ ಕೊರೋನಾ ಪಾಸಿಟಿವ್ ಇರುವ ಬಗ್ಗೆ ಮಾಹಿತಿ ಗೊತ್ತಿದ್ದರೂ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣ ನಡೆಸಿ ಇದೀಗ ಬಸ್ ನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ಭೀತಿ ಉಂಟು ಮಾಡಿರುವ ಘಟನೆ ನರಸೀಪುರದಲ್ಲಿ ನಡೆದಿದೆ.jk-logo-justkannada-logo

ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದ ತಂದೆ ಮಕ್ಕಳಿಗೆ ಕೊರೊನ ಪಾಸಿಟಿವ್ ದೃಢವಾಗಿದೆ. ಕೋವಿಡ್ 19 ಪರೀಕ್ಷೆ ಬಳಿಕ ಇಬ್ಬರು ಸೋಂಕಿತರು ಬೆಂಗಳೂರಿಗೆ ತೆರಳಿದ್ದರು. ನಂತರ ಸೋಂಕಿತ ತಂದೆ ಮಕ್ಕಳಿಗೆ ಕೊರೋನಾ ಪಾಸಿಟಿವ್ ಇರುವ ಬಗ್ಗೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಒಪ್ಪಿದ್ದರು.mysore- narasipur-corona-person-ksrtc-bus

ಬಳಿಕ ಸೋಂಕಿತರು ಬೆಂಗಳೂರಿನಿಂದ ನರಸೀಪುರಕ್ಕೆ ಕೆಎಸ್ ಆರ್ ಟಿಸಿ ಬಸ್ ನಲ್ಲೇ ಪ್ರಯಾಣಿಸಿದ್ದಾರೆ. ತಮಗೆ ಕೊರೋನಾ ಪಾಸಿಟಿವ್ ಇರುವುದು ಗೊತ್ತಿದ್ದರೂ ಬಸ್ ನಲ್ಲಿ ಪ್ರಯಾಣಿಸಿದ್ದು ಇದೀಗ ಪ್ರಯಾಣಿಕರಿಗೆ ಭೀತಿ ಎದುರಾಗಿದೆ.ಇನ್ನು  ಸೋಂಕಿತ ವ್ಯಕ್ತಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನಲೆ ಬಸ್ ಕಂಡಕ್ಟರ್ ರನ್ನ ಕ್ವಾರಂಟೈನ್ ಮಾಡುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಬಸ್ಸಿನಲ್ಲಿ ಪ್ರಯಾಣಿಸಿದವರು ಮುಂಜಾಗ್ರತೆಯಾಗಿ ಕ್ವಾರಂಟೈನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.

ಸೋಂಕಿತರನ್ನ ಬಸ್ ನಿಲ್ದಾಣದಿಂದಲೇ ಆರೋಗ್ಯ ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದು ನರಸೀಪುರ ಬಸ್ ನಿಲ್ದಾಣವನ್ನ ಸೀಲ್ ಡೌನ್ ಮಾಡಲಾಗಿದೆ.

Key words: mysore- narasipur-corona-person-ksrtc-bus