ಕೊರೊನಾ ಕ್ಲಸ್ಟರ್ ನಂಜನಗೂಡಿಗೆ ಬಿಗ್ ರಿಲೀಫ್ ..

Promotion

 

ಮೈಸೂರು, ಮೇ 15, 2020 : (www.justkannada.in news ) ನಂಜನಗೂಡು ಪಟ್ಟಣವನ್ನು ಕ್ಲಸ್ಟರ್ ಕಂಟೈನ್ಮೆಂಟ್ ಘಟಕದಿಂದ ತೆರವುಗೊಳಿಸಿ ಆದೇಶಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು, ಕ್ಲಸ್ಟರ್ ಕಂಟೈನ್ಮೆಂಟ್ ಘಟಕದಲ್ಲಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯಕ್ಕೆ ತೆರಳಲು ಸರ್ಕಾರ ಅಥವ ಖಾಸಗಿ ಸಂಸ್ಥೆಯ ಗುರುತಿನ ಚೀಟಿ ಇರಬೇಕು. ಮಾರ್ಚ್ 26ರಿಂದ ಕ್ಲಸ್ಟರ್ ಕಂಟೈನ್ಮೆಂಟ್ ಘಟಕವಾಗಿದ್ದ ನಂಜನಗೂಡು ಪಟ್ಟಣಕ್ಕೆ ಈಗ ರಿಲೀಫ್.

 mysore-nanjanagudu-covid-corona-releef-dc-zone

ಈ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಈ ಎಲ್ಲಾ ಚಟುವಟಿಕೆಗೂ ಅವಕಾಶ :

ದ್ವಿಚಕ್ರ ವಾಹನದಲ್ಲಿ ಓರ್ವ ಓಡಾಡಬಹುದು., ನಾಲ್ಕು ಚಕ್ರ ವಾಹನದಲ್ಲಿ 2 ಓಡಾಡುವ ಅವಕಾಶ. ನಂಜನಗೂಡು ಎಲ್ಲ ಕೈಗಾರಿಗಾ ಚಟುವಟಿಕೆಗೆ ಅವಕಾಶ. ನಂಜನಗೂಡು ಪಟ್ಟಣದಲ್ಲಿರುವ ಕಾರ್ಮಿಕರನ್ನ ಬಳಸಿಕೊಂಡು ಕಟ್ಟಡ ಕಾಮಗಾರಿ ಮಾಡಬಹುದು. ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗತ್ಯ ಸೇವೆ ವಸ್ತುಗಳನ್ನ ಮಾರಾಟಕ್ಕೆ ಅವಕಾಶ. ನಂಜನಗೂಡು ಪಟ್ಟಣದಲ್ಲಿ ಅಗತ್ಯವಸ್ತುಗಳ ಮಾರಾಟಕ್ಕೆ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಅವಕಾಶ. ಕಬ್ಬಿಣ, ಹಾರ್ಡ್‌ವೇರ್,ಸಿಮೇಂಟ್ ಹಾಗೂ ಕಟ್ಟಡ ಕಾಮಗಾರಿಗೆ ಬೇಕಾದ ಅಂಗಡಿ ತೆರೆಯಲು ಅವಕಾಶ.

ಈ ಚಟುವಟಿಕೆಗಳು ನಿರ್ಬಂಧಿಸಲಾಗಿದೆ :

ಬಟ್ಟೆ, ಚಿನ್ನಭರಣ,ಪಾದರಕ್ಷೆಗಳ ಅಂಗಡಿಗೆ ಅವಕಾಶ ಇಲ್ಲ. ಮಾಲ್, ಚಿತ್ರಮಂದಿರ, ಆಟೋ, ಟ್ಯಾಕ್ಸಿ‌ಗೆ ಅವಕಾಶ ಇಲ್ಲ.

——————————-justkannada—————————newsportal——————

key words : mysore-nanjanagudu-covid-corona-releef-dc-zone