ಪಾರ್ಕ್ ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ…

Promotion

ಮೈಸೂರು,ಮಾರ್ಚ್,9,2021(www.justkannada.in):  ಪಾರ್ಕ್ ನಲ್ಲೇ ತಾಯಿ ಮಗುವಿಗೆ ಜನ್ಮ ನೀಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk

ಮೈಸೂರಿನ ಪೀಪಲ್ಸ್ ಪಾರ್ಕ್‌ನಲ್ಲಿ ಈ ಘಟನೆ ನಡೆದಿದೆ. ಕೊಡಗು ಮೂಲದ ಮಹಿಳೆಯೇ ಪಾರ್ಕ್ ನಲ್ಲಿ  ಮಗುವಿಗೆ ಜನ್ಮ ನೀಡಿರುವುದು. ತುಂಬು ಗರ್ಭಿಣಿ ತನ್ನ ಇಬ್ಬರು ಮಕ್ಕಳ ಜೊತೆ ಮೈಸೂರಿಗೆ ಆಗಮಿಸಿದ್ದರು. ಈ ನಡುವೆ ಪಾರ್ಕ್‌ನಲ್ಲಿ ಕುಳಿತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.mysore-mother-gave-birth-baby-park

ಈ ವೇಳೆ ಗರ್ಭಿಣಿ  ಸಹಾಯಕ್ಕೆ ದೈಹಿಕ ಶಿಕ್ಷಕಿ ಶೋಭಾ ಎಂಬುವವರು ಧಾವಿಸಿದ್ದಾರೆ. ತುಂಬು ಗರ್ಭಿಣಿಯ ನೋವಿಗೆ ಸ್ಪಂದಿಸಿ ಶಿಕ್ಷಕಿ ನೆರವಿಗೆ ಧಾವಿಸಿದ್ದು, ಒಂದು ಗಂಟೆ ನೋವಿನ ನಂತರ ತಾಯಿ ಮಗುವಿಗೆ ಜನ್ಮ‌ ನೀಡಿದ್ದಾರೆ. ದೂರವಾಣಿ ಮೂಲಕ ವೈದ್ಯರ ಸಲಹೆ  ಪಡೆದು ಹೆರಿಗೆ ಮಾಡಲಾಗಿದೆ. ಇನ್ನು ಮಗು ಮತ್ತು ತಾಯಿ‌ಯನ್ನ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Key words: mysore-mother – gave -birth – baby – park.