ಮೈಸೂರಿನಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ: ಸರ್ಕಾರಕ್ಕೆ ಶಾಸಕ ತನ್ವೀರ್ ಸೇಠ್ ಸವಾಲು…

ಮೈಸೂರು,ನವೆಂಬರ್,10,2020(www.justkannada.in): ಟಿಪ್ಪುವಿನ ವಿಚಾರದಲ್ಲಿ ಮುಸಲ್ಮಾನರನ್ನು ದ್ವೇಷ ಮಾಡುವ ಕೆಲಸ ಮಾಡಲಾಗುತ್ತಿದೆ. ನಾವು ಮಾಡುವ ಊಟ, ಬಟ್ಟೆಯಲ್ಲಿ ಟೀಕೆ ಮಾಡ್ತಾರೆ. ನಿಮಗೆ ತಾಕತ್ತಿದ್ದರೆ ಸರಾಯಿ, ಜೂಜಾಟ ನಿಷೇಧ ಮಾಡಿ ಎಂದು ಮಾಜಿ ಸಚಿವ, ಶಾಸಕ ತನ್ವೀರ್ ಸೇಠ್ ಸರ್ಕಾರಕ್ಕೆ ಸವಾಲು ಹಾಕಿದರು.mysore-mla-tanveer-sait-rebels-against-government-tippu-jayanti

ಮೈಸೂರಿನ ಬನ್ನಿ ಮಂಟಪದ ಅಪ್ನಾಗಾರ್ ನಲ್ಲಿ  ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ನೇತೃತ್ವದಲ್ಲಿ ಸರಳವಾಗಿ ಟಿಪ್ಪು ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ತನ್ವೀರ್ ಸೇಠ್, ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡಬಾರದು, ಟಿಪ್ಪು ವಿಚಾರದಲ್ಲಿ ಇತಿಹಾಸಕಾರರು ಸತ್ಯವನ್ನ ತಿರುಚುವ ಕೆಲಸ ಮಾಡಿದ್ದಾರೆ. ಇತಿಹಾಸ ತಿರುಚುವವರಿಗೆ ನಾವು ಗೌರವ ಕೊಡುವ ಅಗತ್ಯ ಇಲ್ಲ. ನೂರಾರು ವರ್ಷದಿಂದ ಟಿಪ್ಪು ಅಭಿಮಾನಿಗಳು ಟಿಪ್ಪು ಜಯಂತಿ ಆಚರಿಸಿಕೊಂಡು ಬಂದಿದ್ದಾರೆ. ಆದರೆ ಅವರ ಭಾವನೆಗಳಿಗೆ ನೋವುಂಟು ಮಾಡುವ ಕೆಲಸ ಮಾಡಬಾರದು ಎಂದರು.mysore-mla-tanveer-sait-rebels-against-government-tippu-jayanti

ಸರ್ಕಾರ ಜನಪರ ಕೆಲಸ ಮಾಡದೇ ಟಿಪ್ಪು ಜಯಂತಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ವಾಗ್ದಾಳಿ ನಡೆಸಿದರು.

English summary…

MLA Tanveer Sait rebukes State Govt. at Tipu Jayanti celebrations
Mysuru, Nov.10, 2020 (www.justkannada.in): “The State Government is politicizing Tipu Jayanti celebrations, it has not done any pro-people work till now, they should be ashamed of themselves,” opined MLA Tanveer Sait.
He participated in the Tipu Jayanti celebrations held at the Apnaghar in Banni Mantap, Mysuru. Alleging that historians had attempted to twist the truth, he said there are hundreds of Tipu’s followers in the State who have been celebrating Tipu Jayanti from many years and cautioned the government not to hurt their sentiments. He challenged the government to ban alcohol and gambling if they have guts.

Key words: mysore- MLA -Tanveer Sait- rebels- against -government – Tippu Jayanti