ಕ್ರೆಡಿಟ್ ವಾರ್: ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ ಬಿಜೆಪಿ ಶಾಸಕ ಎಲ್. ನಾಗೇಂದ್ರ.

Promotion

ಮೈಸೂರು,ಮಾರ್ಚ್,10,2022(www.justkannada.in): ಸಂಸದರ ಕ್ರೆಡಿಟ್ ವಾರ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿರುವ ಬಿಜೆಪಿ ಶಾಸಕ ಎಲ್. ನಾಗೇಂದ್ರ, ನಿಮ್ಮ‌ ಮನೆಯ ದುಡ್ಡು ತಂದು ಅಭಿವೃದ್ಧಿ ಮಾಡಿದ್ದರೆ ಕ್ರೆಡಿಟ್ ತೆಗೆದುಕೊಳ್ಳಿ. ನಮಗೆ ಬಿಜೆಪಿಗೆ ಕ್ರೆಡಿಟ್ ಬರಬೇಕು ಎಂದರು.

ಮೈಸೂರಿನಲ್ಲಿ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ಮೋದಿಯವರೇ ಆ ಕ್ರೆಡಿಟ್ ತೆಗೋಳೊದಿಲ್ಲ. ಅವರು ಬಿಜೆಪಿಗೆ ಕ್ರೆಡಿಟ್ ಕೊಡುತ್ತಾರೆ. ಹೀಗಾಗಿ ಸಾರ್ವಜನಿಕಕರ ದುಡ್ ಗೆ ಕ್ರೆಡಿಟ್ ತೆಗೆದುಕೊಳ್ಳುವುದಲ್ಲ. ಅವರ ಮನೆಯಿಂದ ದುಡ್ಡು ತಂದು ಹಾಕಿದ್ದರೆ ಅವರೇ ಕ್ರೆಡಿಟ್ ತೆಗೆದುಕೊಳ್ಳಲಿ. ಸದ್ಯದಲ್ಲಿ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಸ್ಟೋನ್ ಬಿಲ್ದಿಂಗ್ ಗೆ ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಲಿದ್ದಾರೆ. ಸದ್ಯ ಅದನ್ನೂ ನಾನು ತಂದೆ ಎನ್ನದಿದ್ದರೆ ಸಾಕು ಎಂದು ಸಂಸದ ಪ್ರತಾಪ ಸಿಂಹಗೆ ಟಾಂಗ್ ನೀಡಿದರು.

ನಾನು ಸ್ಥಳೀಯ ಶಾಸಕ‌ ನನ್ನ ಅಧ್ಯಕ್ಷತೆಯಲ್ಲಿ ಎಲ್ಲ ಕಾರ್ಯಕ್ರಮ ನಡೆಯಬೇಕು. ನನ್ನ ಅನುಪಸ್ಥಿತಿಯಲ್ಲಿ ಕೆ. ಆರ್ ಆಸ್ಪತ್ರೆ ವಿಚಾರ ಮೀಟಿಂಗ್ ಮಾಡಿದರೆ ಅದಕ್ಕೆ ಬೆಲೆ ಇಲ್ಲ. ಅವರು ಮೀಟಿಂಗ್ ಮಾಡಲಿ ಆದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂಬುದು ನನಗೆ ಬೇಜಾರು. ಇನ್ನೂ ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಿಲ್ಲ. ಈಗಲೆ‌ ಮೀಟಿಂಗ್ ಮಾಡಿದರೆ ಅರ್ಥ ಏನು..? ಶತಮಾನೋತ್ಸವಕ್ಕೆ ಇನ್ನೂ ಎರಡು ವರ್ಷ ಇದೆ.  ಈಗಲೆ ಚರ್ಚೆ ಮಾಡಿದರೆ ಪ್ರಯೋಜನ ಇಲ್ಲ ‌ ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು.

ಪ್ರತಾಪ್ ಸಿಂಹ ಇನ್ನೂ 100, 200 ಕೋಟಿ ಅನುದಾನ ಕೇಂದ್ರ ಸರ್ಕಾರದಿಂದ ತಂದು ಅಭಿವೃದ್ಧಿ ಮಾಡಲಿ ನನಗೂ ಸಂತೋಷ. ಏನಾದರೂ ಸಮಸ್ಯೆ ಆದಾಗ ಸ್ಥಳೀಯ ಶಾಸಕರನ್ನೇ ಕೇಳೋದು. ಇದನ್ನ ಅರ್ಥ ಮಾಡ್ಕೊಳ್ಳಬೇಕು. ನಾನು ಶಾಸಕನಾಗಿದ್ದೀನಿ ನಾನು ಅನುದಾನ ತರುತ್ತೇನೆ. ಬೇರೆ ಕಡೆ ಸಮಸ್ಯೆ ಇದೆ. ಜಿಟಿ ಕ್ಷೇತ್ರದಲ್ಲಿ, ಪಿರಿಯಾಪಟ್ಟಣದಲ್ಲಿ  ಸಾಕಷ್ಟು ಸಮಸ್ಯೆ ಇದೆ. ಅಲ್ಲಿಗೂ ಅನುದಾನ ತಗೊಂಡು ಬನ್ನಿ‌. ನನ್ನ ಕ್ಷೇತ್ರಕ್ಕೆ 150 ಕೋಟಿ ಅನುದಾನ ತಂದಿದ್ದೀನಿ. ಸರ್ಕಾರಸ ಹಣಕ್ಕೆ ನಾವು ಕ್ರೆಡಿಟ್ ತಗೆದುಕೊಳ್ಳೊದಲ್ಲ. ಒಟ್ಟಾರೆ ಬಿಜೆಪಿಗೆ ಆ ಕ್ರೆಡಿಟ್ ಸಲ್ಲಬೇಕು ಎಂದು ಸಂಸದ ಪ್ರತಾಪ್ ಸಿಂಹ ವಿರುದ್ದ ಎಲ್ ನಾಗೇಂದ್ರ ಕಿಡಿಕಾರಿದರು.

Key words: mysore-MLA-L.Nagendra