ಮುಂದಿನ  ದಿನಗಳಲ್ಲಿ ಮೈಸೂರು ಭಾಗಕ್ಕೂ ಸ್ಥಾನ ಸಿಗಬಹುದು- ಸಚಿವ ಜೆ.ಸಿ ಮಾಧುಸ್ವಾಮಿ.

Promotion

ಮೈಸೂರು,ಆಗಸ್ಟ್,5,2021(www.justkannada.in): ಹಳೆ‌ ಮೈಸೂರು ಭಾಗಕ್ಕೆ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯ ಇಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಜೆ.ಸಿ ಮಾಧುಸ್ವಾಮಿ ಮುಂದಿನ ದಿನಗಳಲ್ಲಿ ಮೈಸೂರು ಭಾಗಕ್ಕೂ ಸ್ಥಾನ ಸಿಗಬಹುದು ಎಂದು ಹೇಳಿದ್ದಾರೆ.

ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಶ್ರೀಗಳ ಶಾಖಾ ಮಠದಲ್ಲಿ ಸುತ್ತೂರು ಶ್ರೀಗಳನ್ನು ಸಚಿವ ಜೆಸಿ ಮಾಧುಸ್ವಾಮಿ ಭೇಟಿಯಾದರು. ಈ ವೇಳೆ ಸಚಿವ ಮಾಧುಸ್ವಾಮಿ ಮತ್ತು ಅವರ ಕುಟುಂಬ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದರು. ಸಚಿವ ಮಾಧುಸ್ವಾಮಿ ಕುಟುಂಬ ಸಮೇತರಾಗಿ ಬೆಟ್ಟಕ್ಕೆ ಬಂದು ಅಲ್ಲಿಂದ ಮಠಕ್ಕೆ ತೆರಳಿ ಶ್ರೀಗಳ ಆಶ್ರಿವಾದ ಪಡೆದರು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಮಾಧುಸ್ವಾಮಿ, ನಾನೂ ಕೂಡ ಹಳೆ ಮೈಸೂರು ಭಾಗದವನೇ. ತುಮಕೂರು ಕೂಡ ಹಳೆ ಮೈಸೂರಿನ ಭಾಗವೆ..? ಯಾವುದೋ ಒತ್ತಡಗಳು,ಸಂದರ್ಭಗಳು ಬಂದಾಗ ಕೆಲವು ಸಲ ಹೀಗೆ ಆಗುತ್ತದೆ. ಕೆಲವು ಸಂದರ್ಭಗಳಲ್ಲಿ ಜಾತಿವಾರು, ಪ್ರಾಂತ್ಯಾವಾರು ನೋಡುವುದು ಕಷ್ಟ ಆಗುತ್ತೆ. ಮುಂದಿನ ದಿನ ದಿನಗಳಲ್ಲಿ ಮೈಸೂರು ಭಾಗಕ್ಕೂ ಸ್ಥಾನ ಸಿಗಬಹುದು ಎಂದರು.

ದೇವರಾಜ ಅರಸು ಕಾಲದಿಂದ ಸಿದ್ದರಾಮಯ್ಯ ಕಾಲದವರಗೂ ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ಹೆಚ್ಚಾಗಿತ್ತು. ಮೈಸೂರು ಭಾಗದವರೆ ಹೆಚ್ವು ಮಂತ್ರಿಗಳು ಇರುತ್ತಿದ್ದರು ಈಗ ಅದು ಸರಿಹೋಗಿರಬಹುದು. ಪ್ರಾದೇಶಿಕ ಅಸಮತೋಲ ಅನ್ನುವುದನ್ನ ಬಳಸಬಾರದು. ಕೆಲವು ಸಲ ಅನಿವಾರ್ಯವಾಗಿರುತ್ತೆ. ಮಂತ್ರಿಗಳಾಗೋದು ಇಡೀ ರಾಜ್ಯಕ್ಕೆ. ಒಂದು ಜಿಲ್ಲೆಗೆ ಸೀಮಿತ ಮಾಡಬಾರದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಬೊಮ್ಮಾಯಿ  ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಟಾಂಗ್ ನೀಡಿದ ಸಚಿವ ಮಾಧುಸ್ವಾಮಿ, ಸಿದ್ದರಾಮಯ್ಯ ಮಾಡಬೇಕಿರೋದು ಅದೇ ಕೆಲಸ. ವಿರೋಧ ಪಕ್ಷದಲ್ಲಿ ಕೂತಾಗ ನಮ್ಮನ ಹೊಗಳೋಕೆ ಆಗಲ್ಲ. ಅವರು ವಿರೋಧ ಮಾಡಲಿ ಎಂದರು.

Key words: Mysore –ministrial-position-  Minister -JC Madhuswamy-suttur math