ರೈತರ ಜೊತೆ ಸಚಿವ ಸೋಮಣ್ಣ ಮಾತುಕತೆ ಯಶಸ್ವಿ:  ಅನಿರ್ಧಿಷ್ಟಾವಧಿ ಧರಣಿ ಕೈಬಿಟ್ಟ ಅನ್ನದಾತರು…

Promotion

ಮೈಸೂರು,ಜ,3,2020(www.justkannada.in): ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ಜತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ಅನ್ನದಾದರು ಅನಿರ್ಧಿಷ್ಟಾವಧಿ ಧರಣಿಯನ್ನ ಕೈಬಿಟ್ಟಿದ್ದಾರೆ.

ರೈತರ ಸಮಸ್ಯೆಗಳನ್ನ ಬಗೆಹರಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರ ನೇತೃತ್ವದಲ್ಲಿ ಸತತ ಐದು  ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡಸಲಾಗುತ್ತಿತ್ತು. ರೈತರು ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭೇಟಿ ನೀಡಿದರು.  ಸಚಿವ ಸೋಮಣ್ಣಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಜಿ.ಟಿ ದೇವೇಗೌಡ,  ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸಾಥ್ ನೀಡಿದರು.

ಪ್ರತಿಭಟನಾನಿರತ ರೈತರ ಮನವಿಗಳನ್ನು ಆಲಿಸಲು ಮುಂದಾದ ಸಚಿವ ಸೋಮಣ್ಣಗೆ  ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರಿಂದ ರೈತರ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ರೈತರ ಜೊತೆ ಸಚಿವ ಸೋಮಣ್ಣ  ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು ,ರೈತರು ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.

ಜನವರಿ 11ರಂದು ಖುದ್ದು ಗ್ರಾಮಕ್ಕೆ ಭೇಟಿ ನೀಡಿ  ಸ್ಥಳದಲ್ಲೇ ಸಮಸ್ಯೆ ಆಲಿಸಿ  ಪರಿಹಾರ ಮಾಡುವುದಾಗಿ ಸಚಿವ ಸೋಮಣ್ಣ  ಭರವಸೆ ನೀಡಿದರು. ಆ ಹಿನ್ನೆಲೆಯಲ್ಲಿ 5 ದಿನದ ಪ್ರತಿಭಟನೆಯನ್ನ ತಾತ್ಕಾಲಿಕವಾಗಿ ಕೈಬಿಟ್ಟರು. ಜನವರಿ 11ರ ನಂತರ ಸಚಿವರ ತೀರ್ಮಾನದ ಬಳಿಕ ಹೋರಾಟದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ  ತಿಳಿಸಿದರು.

key words: mysore-Minister Somanna- talks -farmers –successful-protest -withdraw