ಮತ್ತಷ್ಟು ದಿನ ಮೈಸೂರು ಮೇಯರ್ ಆಗಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ ಮೇಯರ್ ತಸ್ನಿಂ…

Promotion

ಮೈಸೂರು,ನವೆಂಬರ್,23,2020(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ಅವರು ಮತ್ತಷ್ಟು ದಿನ ಮೇಯರ್ ಆಗಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.kannada-journalist-media-fourth-estate-under-loss

ಈ ಕುರಿತು ಇಂದು ಮಾತನಾಡಿ ಅಚ್ಚರಿ ಹೇಳಿಕೆ ನೀಡಿರುವ ಮೇಯರ್ ತಸ್ನೀಂ, ಮತ್ತಷ್ಟು ದಿನ ಮೇಯರ್ ಆಗಿ ಮುಂದುವರೆಯಲು ಯುಡಿಗೆ ಮನವಿ ಮಾಡ್ತೇನೆ. ಕಳೆದ ಒಂದು‌ ವರ್ಷದಿಂದ ಕರೋನದಿಂದ ಸಾಕಷ್ಟು ಕೆಲಸಗಳು ಆಗಿಲ್ಲ. ಮೊದಲ ಒಂದೂವರೆ ತಿಂಗಳು ಮಾತ್ರ ಸರಿಯಾಗಿ ಅಡಳಿತ ನಡೆಸಲು ಅವಕಾಶ ಸಿಕ್ಕಿತ್ತು. ಕೊರೋನ ದಿನಗಳಲ್ಲಿ ಸರಿಯಾಗಿ ಕೆಲಸ ಮಾಡಲು ಆಗಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ.  ಜತೆಗೆ ಆರ್ಥಿಕವಾಗಿ ಸಹ ಸಾಕಷ್ಟು ನಷ್ಟವಾಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಇಂತಹ ಅವಕಾಶ ಸಿಗೋದು. ನಮ್ಮ ಈ ಅವಕಾಶ ಕರೋನದಿಂದ ಹಾಳಾಗಿದೆ. ಆದ್ದರಿಂದ ಕಾನೂನಿನಲ್ಲಿ ಅವಕಾಶವಿದ್ದರೆ, ನಾವೆಲ್ಲಾ ಸೇರಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು.mysore-mayor-tasnim-expressed-his-desire-continue-mayor

ಮುಂದೆ ಬರುವ ಮೇಯರ್,ಉಪಮೇಯರ್ ಅವರಿಗೆ ನಮ್ಮ ಅವಧಿಯಲ್ಲಿ ಯಾವುದೇ ಕೆಲಸವಾಗದ ಹಿನ್ನಲೆ, ಯಾವುದೇ ನಡವಳಿಗಳಿರುವುದಿಲ್ಲ, ಹಾಗಾಗಿ ಕಾನೂನು ಅವಕಾಶವಿದ್ದಲ್ಲಿ ಮತ್ತೆ ನಮಗೆ ಹೆಚ್ಚುವರಿ ಅವಕಾಶ ಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಮೈಸೂರಿಗೆ ಅಭಿವೃದ್ದಿ ಮಾಡಬಹುದು. ಈ ಬಗ್ಗೆ ಮುಂದಿನ ತಿಂಗಳ ಮೊದಲ ವಾರದಲ್ಲೇ ಯುಡಿಗೆ ಮನವಿ ಮಾಡಲಿದ್ದೇವೆ. ಪತ್ರದ ಮೂಲಕವು ನಾವೆಲ್ಲರೂ ಮನವಿ ಮಾಡಲಿದ್ದೇವೆ. ದೊಡ್ಡ ಮನಸ್ಸು ಮಾಡಿ ಅವಕಾಶ ನೀಡಿದ್ದಲ್ಲಿ  ಒಳ್ಳೆಯದೇ ಆಗಲಿದೆ ಎಂದು ಮೈಸೂರು ಮೇಯರ್ ತಸ್ನೀಂ ಹೇಳಿಕೆ ನೀಡಿದ್ದಾರೆ.

Key words: mysore Mayor- Tasnim- expressed -his desire -continue – mayor