ಕುದುರೆ ಏರಿ ತಾಲೀಮು ನಡೆಸಿದ ಮೈಸೂರು ಪಾಲಿಕೆ ಮೇಯರ್  ಪುಷ್ಪಲತಾ ಜಗನ್ನಾಥ್..

Promotion

ಮೈಸೂರು,ಸೆ,9,2019(www.justkannada.in):  ಮೈಸೂರಿನ ಪ್ರಥಮ ಪ್ರಜೆ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಇದೇ ಮೊದಲ ಬಾರಿಗೆ ಕುದುರೆ ಏರಿ  ಸುಮಾರು ಒಂದು ತಾಸು ತಾಲೀಮು ನಡೆಸಿದರು.

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕುದುರೆ ಏರಲು ಮೇಯರ್ ಪುಷ್ಪಲತಾ ಜಗನ್ನಾಥ್ ಸಜ್ಜಾಗುತ್ತಿದ್ದು ಹೀಗಾಗಿ ಇಂದು ಮೈಸೂರಿನ ಮೌಂಟೆಡ್ ಪೊಲೀಸ್‌ ಮೈದಾನದಲ್ಲಿ  ಒಂದು ತಾಸು ಕುದುರೆ ಸವಾರಿ ತಾಲೀಮು ಮಾಡಿದರು.

ಪುಷ್ಪಲತಾ ಜಗನ್ನಾಥ್ ಪ್ರತಿನಿತ್ಯ ಒಂದು ತಾಸು ತಾಲೀಮು ನಡೆಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಾರಂಭದಲ್ಲಿ ಕುದುರೆ ಏರಲು ಭಯವಾಗ್ತಿತ್ತು. ಬಳಿಕ ಅಧಿಕಾರಿಗಳು ಕೆಲ ಟಿಪ್ಸ್ ನೀಡಿ ಧೈರ್ಯತುಂಬಿದ್ರು. ಕುದುರೆ ಸವಾರಿ ಒಳ್ಳೆಯ ಅನುಭವ, ಪ್ರತಿದಿನ ತಾಲೀಮಿನಲ್ಲಿ ಭಾಗಿಯಾಗುತ್ತೇನೆ ಎಂದು ಪುಷ್ಪಲತಾ ಜಗನ್ನಾಥ್ ತಿಳಿಸಿದರು.

Key words: Mysore- Mayor – Pushpalata Jagannath-Horse-riding-Workout.