ಮೈಸೂರು ಮೇಯರ್ ಚುನಾವಣೆ: ಶಾಸಕ ತನ್ವೀರ್ ಸೇಠ್ ಮಾರ್ಮಿಕ ಉತ್ತರ: ಬಿಜೆಪಿ ಮಾತಿಗೆ ತಪ್ಪಲ್ಲ ಎಂದ ಜೆಡಿಎಸ್ ಎಂಎಲ್ ಸಿ ಮಂಜೇಗೌಡ.

Promotion

ಮೈಸೂರು,ಸೆಪ್ಟಂಬರ್,5,2022(www.justkannada.in): ಪ್ರತಿಷ್ಠಿತ ಮೈಸೂರು ಮಹಾನಗರಪಾಲಿಕೆ ಮೇಯರ್, ಉಪ‌ಮೇಯರ್ ಆಯ್ಕೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ  ಯಾವ ಪಕ್ಷದ ಜೊತೆಗೂ ಕಾಂಗ್ರೆಸ್ ಮೈತ್ರಿ ಬೇಡ ಎಂದು ವರಿಷ್ಠರು ಹೇಳಿದ್ದಾರೆ‌. ಆದ್ದರಿಂದ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳುವದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ  ಶಾಸಕ ತನ್ವೀರ್ ಸೇಠ್, ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರದಲ್ಲಿ ನನಗೆ ಅಷ್ಟೇನೂ ಆಸಕ್ತಿಯಿಲ್ಲ. ಕಳೆದ ಬಾರಿಯ ಘಟನೆಯಿಂದ ಪಾಠ ಕಲಿತಿದ್ದೇನೆ. ಹಾಗಾಗಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದನಾಗಿದ್ದೇನೆ. ನಮ್ಮ ಸಂಖ್ಯಾಬಲ 26 ಇದೆ, ಬಿಜೆಪಿ ಸಂಖ್ಯಾಬಲ 27 ಇದೆ‌. ಸ್ಥಳೀಯ ಸಂಸ್ಥೆಯಲ್ಲಿ ಯಾರ ಸಂಖ್ಯೆ ಹೆಚ್ಚಿದೆಯೋ ಅವರು ಮೇಯರ್ ಆಗುತ್ತಾರೆ. ಏನೇನು ಆಗುತ್ತದೆಯೋ ಕಾದು ನೋಡೋಣ ಎಂದು ಶಾಸಕ ತನ್ವೀರ್ ಸೇಠ್ ಮಾರ್ಮಿಕವಾಗಿ ಹೇಳಿದರು.start-oxygen-bus-service-mysore-mla-tanvir-sait-letter-incharge-minister

ಬಿಜೆಪಿ ಮಾತಿಗೆ ತಪ್ಪಲ್ಲ, ನಾವೇ ನೂರಕ್ಕೆ ನೂರು ಮೇಯರ್ ಆಗ್ತೇವೆ: ಜೆಡಿಎಸ್ ಎಂಎಲ್ ಸಿ ಮಂಜೇಗೌಡ.

ಮೈಸೂರು ಮೇಯರ್ ಚುನಾವಣೆ ಸಂಬಂಧ ಬಿಜೆಪಿ ಮಾತಿಗೆ ತಪ್ಪಲ್ಲ, ನಾವೇ ನೂರಕ್ಕೆ ನೂರು ಮೇಯರ್ ಆಗ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ. ಎನ್ ಮಂಜೇಗೌಡ  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಮಾತುಕತೆಗೆ ಬಿಜೆಪಿ ಬದ್ದವಾಗಲಿದೆ. ಬಿಜೆಪಿಯವರು ಮಾತಿಗೆ ತಪ್ಪುವುದಿಲ್ಲ ಎಂಬ ಭರವಸೆ ನಮಗಿದೆ. ಒಂದು ವೇಳೆ ಮಾತಿಗೆ ತಪ್ಪಿದರೆ ರಾಜ್ಯದಲ್ಲಿ ಬಿಜೆಪಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ನಾವು ಮೇಯರ್ ಆಗ್ತೆವೆ, ಬಿಜೆಪಿಯವರು ಉಪ ಮೇಯರ್ ಆಗ್ತಾರೆ ಎಂದು ಸಿಎನ್ ಮಂಜೇಗೌಡ ತಿಳಿಸಿದರು.

ಶಾಸಕ ಜಿಟಿ ದೇವೇಗೌಡ ಜೊತೆ ಹೆಚ್ ಡಿ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಪಕ್ಷದ ಅಭ್ಯರ್ಥಿಗೆ  ಮತ ಹಾಕುತ್ತೇನೆ ಎಂದು ಹೇಳಿದ್ದಾರೆ. ವಿಧಾನಪರಿಷತ್ ಸದಸ್ಯ ಮರೀತೀಬ್ಬೆಗೌಡ ಜೊತೆಗೂ ಕೂಡ ಮಾತುಕತೆ ನಡೆಸಲಿದ್ದೇವೆ. ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಹೇಳುತ್ತೇವೆ ಎಂದರು.

Key words: Mysore-Mayor-Election- MLA -Tanveer Sait