ಮೈಸೂರು ಮೇಯರ್ ಚುನಾವಣೆ: ಕಾಂಗ್ರೆಸ್ ಜತೆ ಕೈ ಜೋಡಿಸಲು ಜೆಡಿಎಸ್ ಸಿದ್ಧವಿದೆ- ಶಾಸಕ ತನ್ವೀರ್ ಸೇಠ್ ಹೇಳಿಕೆ.

Promotion

ಮೈಸೂರು,ಆಗಸ್ಟ್,25,2021(www.justkannada.in):  ಇಂದು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್,  ಕಾಂಗ್ರೆಸ್ ಜತೆ ಕೈಜೋಡಿಸಲು ಜೆಡಿಎಸ್ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಶಾಸಕ ತನ್ವೀರ್ ಸೇಠ್, ನಮ್ಮ ನಾಯಕರಿಗೆ ವಾಸ್ತವ ಪರಿಸ್ಥಿತಿಯನ್ನ ತಿಳಿಸಿದ್ದೇವೆ. ಕಾಂಗ್ರೆಸ್ ನಿಲುವು ಇನ್ನು ನಿರ್ಧಾರವಾಗಿಲ್ಲ. ಜೆಡಿಎಸ್ ಮೇಯರ್ ಸ್ಥಾನ ಬಿಟ್ಟು ಕೊಡುವಂತೆ ಕೇಳಿದೆ. ಅಧಿಕಾರ ವಿಚಾರವಾಗಿ ಇನ್ನೂ ಅಂತಿಮವಾಗಿಲ್ಲ. ಕೆಲವೇ ಕ್ಷಣಗಳಲ್ಲಿ ಮೈತ್ರಿ ಬಗ್ಗೆ ನಿರ್ಧಾರವಾಗಲಿದೆ ಎಂದರು.

ಇನ್ನು ಈ ಬಾರಿ ಜೆಡಿಎಸ್ ಗೆ ಮೇಯರ್ ಹುದ್ದೆ ಬಿಟ್ಟು ಕೊಟ್ಟು ಮುಂದೇ ನೀವು ಮೇಯರ್ ಸ್ಥಾನ ಪಡೆದುಕೊಳ್ಳಿ ಎಂದು ಜೆಡಿಎಸ್ ನಾಯಕರು ಕಾಂಗ್ರೆಸ್ ಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

Key words: Mysore- mayor-election-JDS –Congress-MLA- Tanveer sait .