ಜೆಡಿಎಸ್ ಅವನತಿಗೆ ಈ ‘ ಮೈಸೂರು ಮಹಾರಾಜ’ ನೇ ಕಾರಣ : ಸಂದೇಶ್ ನಾಗರಾಜ್

Promotion

 

ಮೈಸೂರು, ಡಿ.10, 2021 : (www.justkannada.in news ) ವಿಧಾನಪರಿಷತ್ ಚುನಾವಣೆ ದಿನವೇ ಎಂಎಲ್ಸಿ ಸಂದೇಶ್ ನಾಗರಾಜ್ ಅಚ್ಚರಿಕೆ ಹೇಳಿಕೆ. ಜೆಡಿಎಸ್ ಪಕ್ಷದ ‘ ಅಪ್ಪ ಮಕ್ಕಳು’ ಬಂದು ಹಿಂದಿನ ದಿನ ಪಕ್ಷದ ಬಿ ಫಾರ್ಮ್ ಕೊಟ್ಟಿದ್ರು ಎಂಬುದಾಗಿ ಹೇಳಿಕೆ ನೀಡಿದ ಸಂದೇಶ್ ನಾಗರಾಜ್

ಮಾಧ್ಯಮಗಳ ಜತೆ ಮಾತನಾಡಿದ ಸಂದೇಶ್ ನಾಗರಾಜ್ ಹೇಳಿದಿಷ್ಟು…

ಅಪ್ಪ  ಹಾಗೂ  ಮಗ ರೇವಣ್ಣ ಬಂದು ಕೊಟ್ಟು ಹೋಗಿದ್ರು. ಜೆ.ಡಿ.ಎಸ್ ಅವರೆ ಮನೆಬಾಗಿಲಿಗೆ ಬಂದಿದ್ರು. ಅಪ್ಪ‌ ಮಕ್ಕಳು ಗುದ್ದಾಡಿಕೊಡಿಕೊಂಡು ನನಗೆ ಅವಮಾನ‌ಮಾಡಿದ್ರು. ಜೆಡಿಎಸ್ ನಿಂದ ನಿಂತರು ಸೋಲ್ತೀನಿ ಅಂತ ಗೊತ್ತಿತ್ತು. ಹಿಂದಿನ ದಿನ ರಾತ್ರಿ ಬಿ.ಫಾರ್ಮ್ ಕೊಟ್ಟು ಹೋಗಿದ್ರು. ಆದರೆ ಮೈಸೂರು ಮಹಾರಾಜರ‌ ಮಾತನ್ನ ಕೇಳಿಕೊಂಡು ಕೊಡಲಿಲ್ಲ.

ಶಾಸಕ ಸಾ.ರಾ.ಮಹೇಶ್ ಹೆಸರೇಳದೆ ಮಹೇಶ್ ರನ್ನ ‘ ಮಹಾರಾಜ ‘ ಎಂದು ವ್ಯಂಗ್ಯ. ನೀನು ಹೊಡೆದಂಗೆ ಮಾಡು ನಾನು ಅತ್ತಂಗೆ ಮಾಡುತ್ತೇನೆ ಅಂತ ಮಾಡಿದ್ರು. ಮೈಸೂರು ಮಹಾರಾಜ ಅಂದ್ರೆ ಚಾಮರಾಜ ಒಡೆಯರ್ ಅಲ್ಲ. ನಮ್ಮಂತವರಲ್ಲೆ ಒಬ್ಬರು ಮಹಾರಾಜರಿದ್ದಾರೆ. ಜೆಡಿಎಸ್ ವರಿಷ್ಠ, ಎಚ್.ಡಿ. ಕುಮಾರಸ್ವಾಮಿಗೆ ಮಂತ್ರಿ, ಸೇನಾಧಿಪತಿ ಎಲ್ಲಾ ಅವರೆ. ಕಡೆಗೊಂದು ದಿನ ಅವರೊಬ್ಬರೆ ಪಕ್ಷದಲ್ಲೆ ಉಳಿದುಕೊಳ್ಳುವುದು. ಎಲ್ಲರೂ ಪಕ್ಷದಿಂದ ಹೋಗಿರೋದು ಆ ಮಹಾರಾಜರಿಂದಲೆ.

ಹಿಂದಿನ ದಿನ ಬಿ‌.ಫಾರ್ಮ್ ಯಾರು ಕೊಟ್ಟಿದ್ದು, ಎಲ್ಲಿ ಕೊಟ್ಟಿದ್ದು.. ಎಲ್ಲಾವನ್ನು ತೋರಿಸುತ್ತೇನೆ. ಯಾರು ಯಾರಿಂದಲೂ ಯಾರನ್ನು ಮುಗಿಸಲು ಸಾಧ್ಯವಿಲ್ಲ. 5 ನೇ ತಾರೀಖು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಹೇಳುತ್ತೇನೆ. ನಂತರ ಯಾರನ್ನ ಯಾರು ಮುಗಿಸುತ್ತಾರೆ ಗೊತ್ತಾಗುತ್ತೆ. ಇಷ್ಟು ದಿನ ಮೈಲ್ಡ್ ರಾಜಕಾರಣ ಮಾಡುತ್ತಿದ್ದೆ. 5 ರ ನಂತರದ ರಫ್ ರಾಜಕಾರಣ ಮಾಡುತ್ತೇನೆ. ಮೈಸೂರಿನಲ್ಲಿ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹೇಳಿಕೆ.

key words : Mysore-jds-sandesh.nagaraj-alleged-sa.ra.mahesh-responsible-for-jds-down.fall