ಜಯಚಾಮರಾಜೇಂದ್ರ ಒಡೆಯರ್ ಜಯಂತ್ಯೋತ್ಸವ: ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ….

Promotion

ಮೈಸೂರು,ಜು,18,2020(www.justkannada.in):  ಇಂದು ವಿಶಾಲ ಕರ್ನಾಟಕದ ಕನಸುಗಾರ ಜಯಚಾಮರಾಜೇಂದ್ರ ಒಡೆಯರ್ ಜಯಂತ್ಯೋತ್ಸವ. ಜೊತೆಗೆ ವರ್ಷಪೂರ್ತಿ ನಡೆದಿದ್ದ  ಜಯಚಾಮರಾಜೇಂದ್ರ ಒಡೆಯರ್ ಸಂಸ್ಮರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯುತ್ತಿದ್ದು,  ಯೂ ಟ್ಯೂಬ್ ಸ್ಟ್ರೀಮಿಂಗ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತಿದೆ.jk-logo-justkannada-logo

ಇಂದು ಜಯಚಾಮರಾಜೇಂದ್ರ ಒಡೆಯರ್ 101 ನೇ ಜನ್ಮ ದಿನ ಆಚರಣೆ.   ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್  ವತಿಯಿಂದ ರಾಜವಂಶಸ್ಥೆ ಡಾ.ಪ್ರಮೋದದೇವಿ ಒಡೆಯರ್ ನೇತೃತ್ವದಲ್ಲಿ  ಜಯಚಾಮರಾಜೇಂದ್ರ ಒಡೆಯರ್  ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಚಾಲನೆ ನೀಡಿದರು.

ಕೊರೊನಾ ಭೀತಿ ಹಿನ್ನೆಲೆ ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ನಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು, ಲೈವ್ ಸ್ಟ್ರೀಮಿಂಗ್ ನಲ್ಲಿ ಕೇಂದ್ರ ಮಾಜಿ ಸಚಿವ ಡಾ.ಕರಣ್ ಸಿಂಗ್, ರಾಜ್ಯ ಸಭಾ ಸದಸ್ಯ ಜೈರಾಂ ರಮೇಶ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ “ಶ್ರೀ ಜಯಚಾಮರಾಜೇಂದ್ರ ಒಡೆಯರ್ ದಿ ಪಬ್ಲಿಕ್ ಫಿಗರ್” ಎಂಬುದರ ಕುರಿತು ಉಪನ್ಯಾಸ  ಕಾರ್ಯಕ್ರಮ ನಡೆಯುತ್ತಿದೆ. ಇನ್ನು ರಾಜಮನೆತನ ಕಾರ್ಯಕ್ರಮಕ್ಕೆ  ಎಲ್ಲರಿಗೂ ಸಾಮಾಜಿಕ ಜಾಲತಾಣದ ಮೂಲಕವೇ ಆಹ್ವಾನ ನೀಡಿತ್ತು. ಯೂ ಟ್ಯೂಬ್ ಸ್ಟ್ರೀಮಿಂಗ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತಿದೆ.

Key words: mysore- jayachamarajendra wodeyar-Centenary of birth