ಮೈಸೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸಿದ ಪೊಲೀಸರು…

Promotion

ಮೈಸೂರು,ನವೆಂಬರ್,20,2020(www.justkannada.in) : ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಸೇರಿ ಐವರನ್ನ ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.kannada-journalist-media-fourth-estate-under-loss

ಪಿರಿಯಾಪಟ್ಟಣದ  ನವೀನ್, ಶಿವರಾಜು, ಹರೀಶ್, ವಿಜಿ ಹಾಗೂ ಹುಣಸೂರಿನ ಯುವತಿ ಅನಿತ ಬಂಧಿತ ಆರೋಪಿಗಳು. ಡಾ. ಪ್ರಕಾಶ್ ಬಾಬು ಎಂಬುವವರ ದೂರಿನ ಮೇರೆಗೆ ಆರೋಪಿಗಳನ್ನ ಬಂಧಿಸಲಾಗಿದೆ.mysore-honeytrap-gang-arrested-police

ಬಂಧಿತ ಆರೋಪಿಗಳು ಖಾಸಗಿ ವಿಡಿಯೋ ಮಾಡಿ ಡಾ. ಪ್ರಕಾಶ್ ಬಾಬು ಅವರಿಗೆ  1 ಕೋಟಿ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಪ್ರಕಾಶ್ ಬಾಬು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಹನಿಟ್ರ್ಯಾಪ್ ಗ್ಯಾಂಗ್ ಅನ್ನ ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Key words: Mysore-Honeytrap –gang- arrested – police