ಹಿಂದೂ ಧರ್ಮ ಧರ್ಮವೇ  ಅಲ್ಲ: ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಪ್ರೊ. ಕೆ.ಎಸ್ ಭಗವಾನ್…

kannada t-shirts

ಮೈಸೂರು,ಅಕ್ಟೋಬರ್,11,2020(www.justkannada.in):   ಪದೇ ಪದೇ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗುತ್ತಿದ್ದ ಪ್ರೊ‌.ಕೆ.ಎಸ್.ಭಗವಾನ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ಧಿಯಾಗಿದ್ದಾರೆ.jk-logo-justkannada-logo

ಹಿಂದೂ ಧರ್ಮ ಧರ್ಮವೇ  ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಹಿಂದೂ ಎಂದರೆ ಗೊತ್ತೆ ಇಲ್ಲ. ಹೀಗಾಗಿ ಹಿಂದೂ‌ ಪದವನ್ನ ತೆಗೆದು ಹಾಕಬೇಕು ಎಂದು ಹೇಳಿಕೆ ನೀಡುವ ಮೂಲಕ ಪ್ರೊ.ಕೆ.ಎಸ್ ಭಗವಾನ್ ವಿವಾದಕ್ಕೆ ಗುರಿಯಾಗಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಪ್ರೊ.ಕೆ.ಎಸ್.ಭಗವಾನ್, ಹಿಂದೂ ಧರ್ಮ ಎಂದರೆ ಬ್ರಾಹ್ಮಣರು ಎಂದರ್ಥ. ಗ್ರಾಮೀಣ ಜನರಿಗೆ ಹಿಂದೂ ಎಂದರೆ ಗೊತ್ತೆ ಇಲ್ಲ. ನೀವು ಯಾವ ಧರ್ಮ ಎಂದರೆ ವಕ್ಕಲಿಗ, ಕುರುಬ ಅಂತ ಜಾತಿಗಳ ಹೆಸರನ್ನಷ್ಟೇ ಹೇಳ್ತಾರೆ. ಹಿಂದೂ ಧರ್ಮ ಎಂದರೆ ಅವರಿಗೆ ಗೊತ್ತೆ ಇಲ್ಲ. ಹೀಗಾಗಿ ಹಿಂದೂ‌ ಪದವನ್ನ ತೆಗೆದು ಹಾಕಬೇಕು ಎಂದು ಹೇಳಿದರು.mysore-hinduism-not-religion-prof-ks-bhagavan-controversial-statement

ಮುಸ್ಲಿಂರನ್ನ ಕೊಳಕು ಎನ್ನುವ ನೀವು ಅವರಿಂದ ಬಾಯಿಂದ ಬಂದಿರುವ ಹಿಂದೂ ಪದವನ್ನ ನಿಮ್ಮ ಧರ್ಮಕ್ಕೆ ಇಟ್ಟಿದ್ದೀರ..? ನಿಮಗೆ ಮಾನ ಮರ್ಯಾದೆ ಇದ್ರೆ ಆ ಪದ ತೆಗೆದು ಹಾಕಿ ಎಂದು ಕಿಡಿಕಾರಿದ ಪ್ರೊ.ಕೆ.ಎಸ್ ಭಗವಾನ್, ಪರ್ಶಿಯನ್ನರು ಸಿಂಧೂ ಪದವನ್ನು ಹಿಂದೂ ಎಂದರು. ಅವರು ಬಳಸಿದ ಪದವನ್ನ ನಿಮ್ಮ ಧರ್ಮದ ಹೆಸರಿಗೆ ಬಳಸಿಕೊಂಡಿದ್ದೀರ. ಹಿಂದೂ ಎಂದರೆ ಬ್ರಾಹ್ಮಣರು, ಉಳಿದವರೆಲ್ಲಾ ಶೂದ್ರರು. ಶೂದ್ರರೂ ಎಂದರೆ ಮನುಸ್ಮೃತಿಯಲ್ಲಿ ವೇಶ್ಯೆಯರು ಎಂದು ಉಲ್ಲೇಖವಾಗಿದೆ ಆ ಪದ ಬಿಟ್ಟು ನಿಮಗೆ ಬೇರೆ ಹುಡುಕಲು ಆಗಿಲ್ವ ಎಂದು ಟೀಕಿಸಿದ್ದಾರೆ.

Key words: mysore- Hinduism -not religion-Prof.KS Bhagavan – controversial statement.

website developers in mysore